ಯಾವಾಗಲೂ ಮಿನುಗುತ್ತಿರಿ...; ಹೊಸ ವರ್ಷದ ಶುಭಾಶಯ ಕೋರಿದ ರಾಗಿಣಿ

Ragini
Published on

ಬೆಂಗಳೂರು: ಡ್ರಗ್ಸ್ ಕೇಸ್​ನಲ್ಲಿ ಆರೋಪಿಯಾಗಿ ಕಳೆದ ವರ್ಷ ಜೈಲುಪಾಲಾಗಿದ್ದ ನಟಿ ರಾಗಿಣಿ, ಇದೀಗ ಬಿಡುಗಡೆಯಾಗಿದ್ದಾರೆ. ತಮ್ಮ ಕುಟುಂಬದ ಜತೆಗೆ ಮನೆಯಲ್ಲಿ ಇರುವ ರಾಗಿಣಿ, ಶನಿವಾರ ಸೋಷಿಯಲ್ ಮೀಡಿಯಾ ಮೂಲಕ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಪ್ರತೀ ವರ್ಷ ಹೊಸ ವರ್ಷ ಸೇರಿ ಹಲವು ಹಬ್ಬಗಳ ಸಂದರ್ಭದಲ್ಲಿ ರಾಗಿಣಿ ಶುಭ ಹಾರೈಸುತ್ತಿದ್ದರು. ಆದರೆ, ಈ ವರ್ಷದ ಆರಂಭದಲ್ಲಿ ಅವರು ಜೈಲಿನಲ್ಲಿದ್ದರು. ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿರುವ ಈಗ ಅವರು ಶುಭ ಹಾರೈಸಿದ್ದಾರೆ.

ಈ ಕುರಿತು ಅವರು, ‘ನಮ್ಮ ನ್ಯಾಯ ಮತ್ತು ಕಾನೂನಿನ ಬಗ್ಗೆ ನನ್ನ ನಂಬಿಕೆ ಹೆಚ್ಚಾಗಿದೆ. ಎಲ್ಲ ನಾಗರೀಕರಂತೆಯೇ ಸಂವಿಧಾನದಡಿ ನನ್ನ ಹಕ್ಕುಗಳಿಗೂ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ನನಗಿದೆ. ದೇವರ ಆಶೀರ್ವಾದದಿಂದ ನನ್ನ ಒಳ್ಳೆಯತನದಿಂದ ದುಷ್ಟಶಕ್ತಿಗಳನ್ನು ಗೆಲ್ಲುತ್ತೀನಿ ಎಂಬ ವಿಶ್ವಾಸವಿದೆ. ನನ್ನ ಕುಟುಂಬದವರು, ಸ್ನೇಹಿತರು ಮತ್ತು ಅಭಿಮಾನಿಗಳ ಬೆಂಬಲ ಮತ್ತು ಪ್ರೋತ್ಸಾಹದಿಂದ ಮುಂದಿನ ಎಲ್ಲ ಕೆಲಸಗಳಲ್ಲಿಯೂ ಗೆದ್ದು ಬರುತ್ತೇನೆ ಎಂಬ ಧೈರ್ಯವಿದೆ. ಹೊಸ ವರ್ಷದ ಶುಭಾಶಯಗಳು. ಯಾವಾಗಲೂ ಮಿನುಗುತ್ತಿರಿ...’ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ತಮ್ಮ ತಾಯಿಯ ಜತೆಗೆ ನಗರದ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ಕೊಟ್ಟು, ದರ್ಶನ ಪಡೆದು ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net