VIDEO | ಈ ವಿಡಿಯೋದಲ್ಲಿ ಯಶ್ ಪುತ್ರ ಯಥರ್ವನ ನಗುವೇ ಹೈಲೈಟ್.. ಇಲ್ಲಿದೆ ನೋಡಿ ವಿಡಿಯೋ

Radhika
Published on

ಬೆಂಗಳೂರು: ನಟ ಯಶ್​ ಅವರಿಗಿಂತ ನಟಿ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರೀಯರು. ಸದಾ ಒಂದಿಲ್ಲೊಂದು ಪೋಸ್ಟ್​ ಹಾಕುತ್ತ, ಅಭಿಮಾನಿಗಳ ಜತೆ ಸಂಪರ್ಕದಲ್ಲಿರುತ್ತಾರೆ. ಅದರಲ್ಲೂ ಮಕ್ಕಳಾದ ಮೇಲೆ ಇಬ್ಬರು ಮುದ್ದು ಪುಟಾಣಿಗಳ ವಿಡಿಯೋ ತುಣುಕುಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಅಂಥದ್ದೇ, ಮತ್ತೊಂದು ವಿಡಿಯೋ ಶೇರ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಪುತ್ರ ಯಥರ್ವನ ನಗುವೇ ಹೈಲೈಟ್.

ಹೌದು, ಯಥರ್ವನ ಕೈಯ ಬೆರಳಿನ ಉಗುರು ತೆಗೆಯುತ್ತಿರುವ ರಾಧಿಕಾ, ಪುತ್ರನ ಮುದ್ದಾದ ನಗುವನ್ನು ಕ್ಯಾಪ್ಚರ್ ಮಾಡಿದ್ದಾರೆ. ಪ್ರತಿ ಬೆರಳಿನ ಉಗುರು ಕತ್ತರಿಸಿದಾಗ, ಯಥರ್ವನ ನಗುವೇ ವಿಶೇಷ ಎನಿಸುತ್ತದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಒಳ್ಳೊಳ್ಳೆ ಕಮೆಂಟ್​ಗಳೂ ಸಂದಾಯವಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net