ಫೈಟರ್ ಪ್ರೇಮ ; ಮಂಜು ಮಸ್ಕಲ್‌ಮಟ್ಟಿ ನಿರ್ದೇಶನದಲ್ಲಿ ‘ವರಾಹ ಚಕ್ರಂ’

Posters (3)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

‘ಮನಸುಗಳ ಮಾತು ಮಧುರ’, ‘ಯುಗಪುರುಷ’, ‘ಗೌರೀಪುತ್ರ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಮಂಜು ಮಸ್ಕಲ್‌ಮಟ್ಟಿ, ದಶಕದ ಬ್ರೇಕ್ ಬಳಿಕ ಮತ್ತೆ ವಾಪಸ್ಸಾಗಿದ್ದಾರೆ. ಚಿತ್ರದ ಹೆಸರು ‘ವರಾಹ ಚಕ್ರಂ’. ಇತ್ತೀಚೆಗಷ್ಟೆ ಚಿತ್ರದ ಟೈಟಲ್ ಬಿಡುಗಡೆ ಮಾಡಲಾಯಿತು. ಪ್ರೇಮಾ, ಸಾಯಿ ಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಬಗ್ಗೆ ಮಂಜು, ‘ನಾನು ನಟನಾಗಲು ಚಿತ್ರರಂಗಕ್ಕೆ ಬಂದವನು. ಕ್ರಮೇಣ ನಿರ್ದೇಶನ, ನಿರ್ಮಾಣ ಮಾಡಿದೆ. ಇದೀಗ ಸಿನಿಮಾ ವಿತರಣೆ ಕೂಡ ಮಾಡುತ್ತಿದ್ದೇನೆ. ಆದರೆ, ತೆಲಂಗಾಣದಲ್ಲಿ ಸದ್ಯ ರಾಜಕೀಯ ಪರಿಸ್ಥಿತಿ ಸರಿಯಿಲ್ಲದ್ದಬೆಂಗಳೂರಿನಲ್ಲಿ ನಡೆಯುತ್ತಿರುವ ಸಂಸ್ಕೃತಿಯ ಕಗ್ಗೊಲೆ, ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಕಥೆಯಿದು’ ಎಂದು ಹೇಳಿಕೊಂಡರು.

ನಟಿ ಪ್ರೇಮ ಈ ಚಿತ್ರದಲ್ಲಿ ಆ್ಯಕ್ಷನ್ ಮಾಡಲಿದ್ದು, ‘ನಾನು ಸಾಮಾನ್ಯ ಕಥೆಗಳನ್ನು ಒಪ್ಪುವುದಿಲ್ಲ. ಈ ಕಥೆ ಕೇಳಿ ಸ್ಫೂರ್ತಿದಾಯಕ ಅನ್ನಿಸಿತು. ನನ್ನ ಪಾತ್ರವೂ ಚಾಲೆಂಜಿಂಗ್ ಅಂತನ್ನಿಸಿ ಒಪ್ಪಿಕೊಂಡೆ’ ಎಂದರು. ಡಾ. ವಿ. ನಾಗೇಂದ್ರ ಪ್ರಸಾದ್ ಈ ಚಿತ್ರಕ್ಕೆ ಸಾಹಿತ್ಯ, ಸಂಭಾಷಣೆ ಹಾಗೂ ಸಂಗೀತ ನಿರ್ದೇಶನದ ಜತೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜತೆಗೆ ಅರ್ಜುನ್ ದೇವ್, ರಾಣಾ, ಇಮ್ರಾನ್ ಷರೀಫ್​, ಆರ್ಯನ್, ಪ್ರತೀಕ್ ಪಂಚ ಪಾಂಡವರಂತೆ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಶರತ್ ಕುಮಾರ್ ಛಾಯಾಗ್ರಹಣ, ಭಾರ್ಗವ ಸಂಕಲನವಿರಲಿದೆ. ಬೆಂಗಳೂರು, ನೆಲ್ಲೂರು, ಪೊಲ್ಲಾಚ್ಚಿ, ಭಟ್ಕಳ, ಹಿರಿಯೂರು ಸೇರಿ ಹಲವೆಡೆ ಚಿತ್ರೀಕರಣ ನಡೆಸುವ ಆಲೋಚನೆ ಚಿತ್ರತಂಡದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net