ಸೌತ್ ಮಂದಿಯ ಬಗ್ಗೆ ಪೂಜಾ ಹೇಳುವುದೇನು?

Pooja hegde
Published on

ಬಾಲಿವುಡ್​ನಿಂದ ಸಿನಿಮಾ ಕರಿಯರ್ ಆರಂಭಿಸಿದರೂ, ದಕ್ಷಿಣ ಭಾರತದಲ್ಲಿಯೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಕರ್ನಾಟಕ ಮೂಲದ ನಟಿ ಪೂಜಾ ಹೆಗ್ಡೆ. ಹಾಗಾಗಿ ಹಿಂದಿ ಸಿನಿಮಾರಂಗಕ್ಕಿಂತ ಸೌತ್​ನತ್ತಲೇ ಅವರಿಗೆ ಸೆಳೆತ ಹೆಚ್ಚು. ಅಷ್ಟೇ ಅಲ್ಲ, ಅಭಿಮಾನಿಗಳ ಬೇಕುಬೇಡಗಳನ್ನು ಅಷ್ಟೇ ಚೆನ್ನಾಗಿ ಅರಿತಿದ್ದಾರವರು. ಅದಕ್ಕೆ ಸಾಕ್ಷ್ಯ ಎಂಬಂತೆ ಇತ್ತೀಚೆಗಷ್ಟೇ ಈ ಭಾಗದ ಅಭಿಮಾನಿಗಳ ಅಭಿರುಚಿ ಎಂಥದ್ದು ಎಂಬುದನ್ನು ಹೇಳಿಕೊಂಡಿದ್ದಾರವರು.

‘ದಕ್ಷಿಣ ಭಾರತದ ಸಿನಿಮಾಭಿಮಾನಿಗಳಿಗೆ ನಟಿಯರ ಹೊಕ್ಕುಳು ಮತ್ತು ಸೊಂಟದ ಮೇಲೆಯೇ ಹೆಚ್ಚು ಆಸಕ್ತಿ. ಸಿನಿಮಾ ನಿರ್ದೇಶಕರು ಸಹಿತ ಅದನ್ನೇ ಹೆಚ್ಚು ವೈಭವೀಕರಿಸಿ ತೆರೆಮೇಲೆ ತೋರಿಸುತ್ತಾರೆ. ಸೊಂಟ ಮತ್ತು ಹೊಕ್ಕುಳು ಬದಲಿಗೆ ನನ್ನ ಕಾಲುಗಳು ಹೆಚ್ಚು ಆಕರ್ಷಕವಾಗಿವೆ. ಅದನ್ನು ನೋಡಲು ನಾನು ಬಯಸುತ್ತೇನೆ’ ಎಂದಿದ್ದಾರವರು.

ಟಾಲಿವುಡ್​ನಲ್ಲಿ ಅಲ್ಲು ಅರ್ಜುನ್ ಜತೆಗೆ ನಟಿಸಿದ್ದ ‘ಅಲಾ ವೈಕುಂಟಪುರಂಲೋ’ ಚಿತ್ರದಲ್ಲಿ ‘ಬುಟ್ಟ ಬೊಮ್ಮ..’ ಹಾಡಿನಲ್ಲಿ ಪೂಜಾ ಅವರ ಹೊಕ್ಕುಳನ್ನೇ ಹೆಚ್ಚು ತೋರಿಸಲಾಗಿದೆ. ಆ ಬಗ್ಗೆ ಪ್ರಶ್ನೆ ಎದುರಾದಾಗ ಈ ಮೇಲಿನಂತೆ ಅವರು ಉತ್ತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net