

ಸಾಮಾನ್ಯವಾಗಿ ನಟಿಯರ ಸೌಂದರ್ಯಕ್ಕೆ ಮಾರು ಹೋಗಿ ನಟರು, ನಿರ್ದೇಶಕರು, ನಿರ್ಮಾಪಕರು, ವಿಐಪಿಗಳು, ಕ್ರಿಕೆಟಿಗರು, ಉದ್ಯಮಿಗಳೇ ಅವರ ಹಿಂದೆ ಬಿದ್ದು, ಪ್ರೀತಿಸಿ ಮದುವೆ ಆಗುವುದುಂಟು. ಅದಕ್ಕೆ ಹಲವು ಸಾ ನಮ್ಮ ಕಣ್ಣಮುಂದಿವೆ. ಆದರೆ, ಕನ್ನಡದ "ಮಿಲನ', "ಪೃಥ್ವಿ' ಜತೆಗೆ ತಮಿಳು, ಮಲಯಾಳಂನಲ್ಲಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಕೇರಳ ಮೂಲದ ಪಾರ್ವತಿ ತಿರುವೊತ್ತು ಒಂಟಿತನ ಸಾಕಾಗಿ ಡೇಟಿಂಗ್ ಆ್ಯಪ್ಗಳ ಮೊರೆ ಹೋಗಿದ್ದಾರಂತೆ. ರಾಷ್ಟ್ರಪ್ರಶಸ್ತಿ, ಎರಡು ಕೇರಳ ರಾಜ್ಯಪ್ರಶಸ್ತಿ ಹಾಗೂ ಐದು ಫಿಲಂಫೇರ್ಗಳನ್ನು ಪಡೆದಿರುವ ಸುಂದರಿ, ಪ್ರತಿಭಾನ್ವಿತೆಯಾದರೂ ಪಾರ್ವತಿಗೆ ಬಾಯ್ಫ್ರೆಂಡ್ ಇಲ್ಲವಂತೆ.
ಈ ಬಗ್ಗೆ ಖುದ್ದು ಅವರೇ, "ನಾಲ್ಕು ತಿಂಗಳ ಹಿಂದೆ ನನ್ನ ಫ್ರೆಂಡ್ಸ್ ನನಗೆ ಡೇಟಿಂಗ್ ಆ್ಯಪ್ಗಳ ಬಗ್ಗೆ ಹೇಳಿದರು. ಆನ್ಲೈನ್ನಲ್ಲಿ ಜನರನ್ನು ಶಾಪಿಂಗ್ ಮಾಡುವುದು ನನಗೆ ವಿಚಿತ್ರ ಅನ್ನಿಸಿತ್ತು. ಆಗ ನಾನು ಫ್ರಾನ್ಸ್ನಲ್ಲಿದ್ದೆ. ಒಂದು ಡೇಟಿಂಗ್ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು, ಪ್ರಯತ್ನಿಸಿದೆ. ಆದರೆ, ಅದು ಇಷ್ಟವಾಗದೇ ಆ್ಯಪ್ನೇ ತೆಗೆದುಬಿಟ್ಟೆ. ಭಾರತಕ್ಕೆ ವಾಪಸ್ಸಾದ ಬಳಿಕವೇ ಕೆಲ ಡೇಟಿಂಗ್ ಆ್ಯಪ್ ಬಳಸುತ್ತಿದ್ದೇನೆ. ಆದರೆ, ಅದಕ್ಕಿಂತ ನನಗೆ ಹಿಂದಿನ ಕಾಲದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿ, ಮಾತನಾಡಿ, ಅರ್ಥ ಮಾಡಿಕೊಳ್ಳುವ ರೀತಿಯೇ ಇಷ್ಟ' ಎಂದು ಹೇಳಿಕೊಂಡಿದ್ದಾರೆ.
ಜತೆಗೆ ತಮ್ಮ ಲವ್ ಮತ್ತು ಬ್ರೇಕಪ್ ಕುರಿತೂ ಮೌನ ಮುರಿದಿರುವ ಪಾರ್ವತಿ, "ನಾನು ಈಗಲೂ ನನ್ನ ಹಳೆಯ ಬಾಯ್ ಫ್ರೆಂಡ್ಗಳ ಜತೆ ಸಂಪರ್ಕದಲ್ಲಿದ್ದೇನೆ. ಅಪರೂಪಕ್ಕೊಮ್ಮೆ ಕರೆ ಮಾಡಿ ಮಾತನಾಡುತ್ತಿರುತ್ತೇನೆ. ಜೀವನದ ಯಾವುದೋ ಒಂದು ಳಿಗೆಯಲ್ಲಿ ಪ್ರೀತಿಸುತ್ತಿದ್ದವರು ಅವರು. ಇಬ್ಬರೂ ಒಟ್ಟಿಗೆ ಬಾಳಬೇಕು ಅಂದುಕೊಂಡಿದ್ದವರು. ಹೀಗಾಗಿ ಅವರ ಜತೆಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದೇನೆ. ಆದರೆ, ಸದ್ಯ ಕೆಲ ವರ್ಷಗಳಿಂದ ನಾನು ಸಿಂಗಲ್' ಎಂದಿದ್ದಾರೆ ಪಾರ್ವತಿ.