9 ಸೈಕೋಪಾತ್​ಗಳ ಜತೆಗಿದ್ದರಂತೆ ನಟಿ ನೋರಾ ಫತೇಹಿ! ಯಾರವರು?

Nora (12)
Published on

ಬಾಲಿವುಡ್​ನಲ್ಲಿ ನಟಿಸಬೇಕು ಅಂತ ಭಾರತದ ಮಂದಿ ಮಾತ್ರವಲ್ಲ, ವಿದೇಶೀ ಕಲಾವಿದರೂ ಕನಸು ಕಾಣುತ್ತಾರೆ. ಕತ್ರಿನಾ ಕೈಫ್​, ಜಾಕ್​ಲೀನ್​ ರ್ನಾಂಡಿಸ್​, ನೋರಾ ತೇಹಿ, ಜಿಮ್​ ಸರ್ಬ್​… ಹೀಗೆ ಹಲವರು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ಹಾಗಂತ ಇವರ ಹಾದಿಯೇನು ಸುಗಮವಾಗಿರಲಿಲ್ಲ. ಪ್ರತಿಯೊಬ್ಬರೂ ಅವರದೇ ಆದ ಸಮಸ್ಯೆ, ಸಂಕಷ್ಟಗಳನ್ನು ಎದುರಿಸಿದ್ದಾರೆ.

ಇತ್ತೀಚೆಗಷ್ಟೆ ನಟಿ ನೋರಾ ತೇಹಿ, "ನಾನು ಭಾರತಕ್ಕೆ ಬಂದಾಗ ನನ್ನ ಬಳಿ ಕೇವಲ 5 ಸಾವಿರ ರೂ. ಇತ್ತು. 3 ರೂಮ್​ಗಳ ಅಪಾರ್ಟ್​ಮೆಂಟ್​ನಲ್ಲಿ 9 ಮಂದಿ ಸೈಕೋಪಾತ್​ಗಳ ಜತೆ ಇರಬೇಕಿತ್ತು. ಎಲ್ಲರೂ, ಎಲ್ಲವನ್ನೂ ಶೇರ್​ ಮಾಡಿಕೊಳ್ಳುತ್ತಿದ್ದರು. ಅದಕ್ಕೆ ನಾನು ಸಿದ್ಧಳಿರಲಿಲ್ಲ. ಇದು ನನಗೆ ಬೇಕಿತ್ತಾ? ಅಂತ ಆಘಾತಕ್ಕೊಳಗಾಗಿದ್ದೆ. ಏಜೆನ್ಸಿ ಮೂಲಕ ಕೆಲಸ ಸಿಗುತ್ತಿತ್ತು. ಆದರೆ, ಬಾಡಿಗೆ, ದೈನಂದಿನ ಖರ್ಚು, ಕಮಿಷನ್​ ಅಂತೆಲ್ಲ ಹಿಡಿದು, ಅಲ್ಪಸ್ವಲ್ಪ ಹಣ ನೀಡುತ್ತಿದ್ದರು. ಬಹುತೇಕ ದಿನಗಳಲ್ಲಿ ಕೇವಲ ಮೊಟ್ಟೆ, ಬ್ರೆಡ್​, ಹಾಲು ಮಾತ್ರ ಸೇವಿಸಲು ಹಣವಿರುತ್ತಿತ್ತು. ಹೀಗೆ ಏಜೆನ್ಸಿಗಳು ಶೋಷಣೆ ಮಾಡುತ್ತಿದ್ದವು. ಆ ಕಷ್ಟದ ದಿನಗಳನ್ನು ನೆನಪಿಸಿಕೊಂಡರೆ, ಈಗಲೂ ಬೇಸರವಾಗುತ್ತದೆ' ಎಂದು ಹೇಳಿಕೊಂಡಿದ್ದಾರೆ.

2014ರಲ್ಲಿ "ರೋರ್​: ಟೈಗರ್ಸ್​ ಆಫ್​ ಸುಂದರ್​ಬನ್ಸ್​' ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ ನೋರಾ, ಇದುವರೆಗೆ 15ಕ್ಕೂ ಹೆಚ್ಚು ಸ್ಪೆಷಲ್​ ಸಾಂಗ್​ಗಳು ಸೇರಿ 25 ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಅವರು "ಡಾನ್ಸಿಂಗ್​ ಡ್ಯಾಡ್​' ಮತ್ತು ತೆಲುಗಿನ "ಮಟ್ಕಾ' ಚಿತ್ರದಲ್ಲಿ ಬಿಜಿಯಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net