

"ರೋರ್' ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ ನಟಿ ನೋರಾ ಹೆಚ್ಚು ಮಿಂಚಿದ್ದು ಸ್ಪೆಷಲ್ ಸಾಂಗ್ಗಳಲ್ಲಿ. "ದಿಲ್ಬರ್', "ಓ ಸಾಕಿ ಸಾಕಿ', "ಕುಸು ಕುಸು', "ಮಣಿಕೆ' ಸೇರಿ ಹಲವು ಐಟಂ ಸಾಂಗ್ಗಳಲ್ಲಿ ಕುಣಿದು ಕುಪ್ಪಳಿಸಿರುವ ಅವರು, ಕೆಲ ಮ್ಯೂಸಿಕ್ ವಿಡಿಯೋ ಆಲ್ಬಂ ಹಾಡುಗಳು ಸೇರಿ ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದಾರೆ. ಹೀಗೆ ಕಳೆದ ಒಂದು ದಶಕದಲ್ಲಿ ಡಾನ್ಸ್ ಲೋಕದಲ್ಲಿ ತಮ್ಮದೇ ಹೆಸರು ಮಾಡಿರುವ ಅವರಿಗೆ ಈ ವರ್ಷ ಅದೃಷ್ಟ ಕೈಹಿಡಿದಿತ್ತು.
ಬ್ಯಾಕ್ ಟು ಬ್ಯಾಕ್ "ಕ್ರಾಕ್' ಮತ್ತು "ಮಡ್ಗಾಂವ್ ಎಕ್ಸ್ಪ್ರೆಸ್' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ನೋರಾ, ಪ್ಯಾನ್ ಇಂಡಿಯಾ ಮೂಡಿಬರುತ್ತಿರುವ ತೆಲುಗಿನ "ಮಟ್ಕಾ' ಚಿತ್ರದಲ್ಲಿ ವರುಣ್ ತೇಜ್, ಮೀನಾ ಚೌಧರಿ ಜತೆ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದರು. ಈಗಾಗಲೇ ತೆಲುಗು, ತಮಿಳು ಚಿತ್ರಗಳ ಐಟಂ ಸಾಂಗ್ಗಳಲ್ಲಿ ಕುಣಿದಿದ್ದ ನೋರಾ, ಇದೇ ಮೊದಲ ಬಾರಿಗೆ ದಣದ ಚಿತ್ರವೊಂದರಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಲು ಆಯ್ಕೆಯಾಗಿದ್ದ ಕಾರಣ, "ಮಟ್ಕಾ' ಬಗ್ಗೆ ಎಲ್ಲಿಲ್ಲದ ನಿರೀೆ ಇಟ್ಟುಕೊಂಡಿದ್ದರು. ಆದರೆ, ಚಿತ್ರದ ಶೂಟಿಂಗ್ ವೇಳೆ ಪೆಟ್ಟು ಮಾಡಿಕೊಂಡು ಅವರಿಗೆ ವೈದ್ಯರು ಎರಡು ತಿಂಗಳು ವಿಶ್ರಾಂತಿ ಪಡೆಯಲು ಸೂಚಿಸಿದ ಕಾರಣ ಸದ್ಯ ಅವರ ಭಾಗದ ಶೂಟಿಂಗ್ ಮುಂದೂಡಲಾಗಿದೆ.
ವೀಲ್ಚೇರ್ನಲ್ಲಿ ನಂತರ ಕ್ರಚಸ್ ಹಿಡಿದು ಪ್ರತಿದಿನ ಫಿಸಿಯೋಥೆರಪಿಗೆ ಬರುತ್ತಿದ್ದ ನೋರಾ ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದು, ಕೆಲವೇ ದಿನಗಳಲ್ಲಿ ಶೂಟಿಂಗ್ಗೆ ಮರಳುವ ಉತ್ಸಾಹದಲ್ಲಿದ್ದಾರೆ. "ಮಟ್ಕಾ' ಜತೆ "ಡಾನ್ಸಿಂಗ್ ಡ್ಯಾಡ್' ಎಂಬ ಮತ್ತೊಂದು ಚಿತ್ರದಲ್ಲಿ ನೋರಾ ಕಾಣಿಸಿಕೊಳ್ಳಲಿದ್ದಾರೆ.