ಇದು ನಮಿತಾ ಥಿಯೇಟರ್: ನೈಜ ಘಟನೆ ಆಧರಿತ ಕಥೆಗಳು ಇದರ ವಿಶೇಷತೆ

namitha-removebg-preview
Published on

ಒಂದು ಕಾಲಕ್ಕೆ ಮಾದಕ ನಟಿ ಎಂದೇ ಜನಪ್ರಿಯವಾಗಿದ್ದ ನಮಿತಾ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲೇ ಇರಲಿಲ್ಲ. ತಮಿಳಲ್ಲದೆ ಕನ್ನಡ ಮತ್ತು ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿದ್ದ ನಮಿತಾ ಈಗೇನು ಮಾಡುತ್ತಿದ್ದಾರೆ ಎಂದು ಹುಡುಕಹೊರಟವರಿಗೆ ಕೊನೆಗೂ ಉತ್ತರ ಸಿಕ್ಕಿದೆ.

ನಮಿತಾ ಸದ್ದಿಲ್ಲದೆ ‘ನಮಿತಾ ಥಿಯೇಟರ್’ ಎಂಬ ಓವರ್ ದಿ ಟಾಪ್ (ಓಟಿಟಿ) ಪ್ರಾರಂಭಿಸುವುದಕ್ಕೆ ತಯಾರಿ ನಡೆಸಿದ್ದು, ಮುಂದಿನ ತಿಂಗಳು ಈ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರಂತೆ. ಈಗಾಗಲೇ ಹಲವು ಓಟಿಟಿಗಳಿರುವಾಗ ನಮಿತಾ ಥಿಯೇಟರ್ ಹೇಗೆ ವಿಭಿನ್ನ ಎಂಬ ಪ್ರಶ್ನೆ ಬರಬಹುದು. ವಿಶೇಷವೇನೆಂದರೆ, ಈ ಓಟಿಟಿಯಲ್ಲಿ ಬರೀ ನೈಜ ಘಟನೆಗಳನ್ನಾಧರಿಸಿದ ಚಿತ್ರಗಳು, ಕಿರುಚಿತ್ರಗಳು ಮತ್ತು ವೆಬ್​ಸೀರೀಸ್​ಗಳಿಗೆ ಮೊದಲ ಪ್ರಾಶಸ್ಱವಂತೆ.

ಬೇರೆಲ್ಲ ಓಟಿಟಿಗಳಲ್ಲಿ ಕಾಲ್ಪನಿಕ ವಿಜೃಂಭಿಸುತ್ತಿರುವಾಗ, ತಮ್ಮ ಓಟಿಟಿಯಲ್ಲಿ ಬರೀ ನೈಜ ಘಟನೆಯಾಧಾರಿತ ಕಂಟೆಂಟ್ ನಿರ್ಮಾಣ ಮತ್ತು ಪ್ರದರ್ಶನಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ. ನಟಿಯಾಗಿದ್ದ ನಮಿತಾ ಅವರನ್ನು ಈ ಕ್ಷೇತ್ರಕ್ಕೆ ಕರೆತಂದವರು ರವಿವರ್ಮ. ಹಲವು ಕಾಪೋರೇಟ್ ಬಿಜಿನೆಸ್​ಗಳಲ್ಲಿ ತೊಡಗಿಸಿಕೊಂಡಿರುವ ರವಿವರ್ಮ ಇಂಥದ್ದೊಂದು ಐಡಿಯಾ ಹೇಳುತ್ತಿದ್ದಂತೆ, ನಮಿತಾ ಖುಷಿಯಿಂದ ಯಾಕಾಗಬಾರದು ಎಂದು ಹೆಜ್ಜೆ ಇಟ್ಟಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net