ಗಾಯಕಿಯಾದರು ಮೇಘಶ್ರೀ; ಮ್ಯೂಸಿಕಲ್ ಲವ್​ಸ್ಟೋರಿ ‘ರಿದಂ’ನಲ್ಲಿ ನಟನೆ

Megha
Published on

ಬೆಂಗಳೂರು: ಆಗೊಮ್ಮೆ ಈಗೊಮ್ಮೆ ಕನ್ನಡದಲ್ಲಿ ಸಂಗೀತಪ್ರಧಾನ ಚಿತ್ರಗಳು ಬರುತ್ತಿರುತ್ತವೆ. ಆದರೆ, ‘ಪ್ರೇಮಲೋಕ’, ‘ಎಕ್ಸ್​ಕ್ಯೂಸ್​ವಿುೕ’ ಚಿತ್ರಗಳಂತೆ ಆ ಸಂಗೀತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದು ಅಪರೂಪ. ಆದರೆ, ನಾವು ಸೌಂಡ್ ಮಾಡೇ ಮಾಡ್ತೀವಿ ಎಂಬ ನಂಬಿಕೆಯೊಂದಿಗೆ ‘ರಿದಂ’ ಚಿತ್ರತಂಡ ಬರುತ್ತಿದೆ.

ಮಂಜು ಮಿಲನ್ ನಿರ್ದೇಶಿಸಿ, ನಿರ್ವಿುಸಿ, ನಾಯಕನಾಗಿ ನಟಿಸಿರುವ ‘ರಿದಂ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯ ಸೆನ್ಸಾರ್​ಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಚಿತ್ರದಲ್ಲಿ ಮಂಜು ಮಿಲನ್​ಗೆ ‘ಕೃಷ್ಣ ತುಳಸಿ’ ಖ್ಯಾತಿಯ ಮೇಘಶ್ರೀ ನಾಯಕಿಯಾಗಿದ್ದಾರೆ.

ಅಂದಹಾಗೆ, ಮೇಘಶ್ರೀ ಅವರಿಲ್ಲಿ ಒಬ್ಬ ಗಾಯಕಿ, ವಯೊಲಿನ್ ವಾದಕಿ ಪಾತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರು, ಮೈಸೂರು, ಮೇಲುಕೋಟೆ ಸೇರಿದಂತೆ ದೂರದ ಸಿಂಗಪೂರ್​ನಲ್ಲಿ ಸುಮಾರು 62 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಸಪ್ತಸ್ವರಗಳಂತೆಯೇ ಚಿತ್ರದಲ್ಲಿ ಏಳು ಹಾಡುಗಳಿದ್ದು, ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ. ಮಂಜುನಾಥ್ ಮತ್ತು ಮಲ್ಲಿಕಾರ್ಜುನ್ ಚಿತ್ರದ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಮಂಜು ಮಿಲನ್, ಮೇಘಶ್ರೀ ಜತೆಗೆ ಸುಮನ್, ಪದ್ಮಾ ವಾಸಂತಿ, ವಿನಯಾ ಪ್ರಸಾದ್, ಗಿರಿಜಾ ಲೋಕೇಶ್ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net