

ಮುಂಬೈ: ಖ್ಯಾತ ನಟಿಯೊಬ್ಬರ ಕಾರು ಇಂದು ಅಪಘಾತಕ್ಕೀಡಾಗಿದ್ದು, ನಟಿ ಪ್ರಯಾಣಿಸುತ್ತಿದ್ದ ಕಾರು ಇನ್ನೆರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಮುಂಬೈನ ಪನ್ವೇಲ್ ಬಳಿ ಇಂದು ಸಂಜೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಯಾಣಿಸುತ್ತಿದ್ದ ರೇಂಜ್ ರೋವರ್ ಕಾರು, ಚಾಲಕನ ನಿಯಂತ್ರಣ ತಪ್ಪಿ ಎಕ್ಸ್ಪ್ರೆಸ್ ವೇನಲ್ಲಿದ್ದ ಇತರ ಮೂರು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮಲೈಕಾ ಕಣ್ಣಿನ ಬಳಿ ಗಾಯವಾಗಿದ್ದು, ಆಕೆಯನ್ನು ನವಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಳೆ ಸಂಜೆಯ ಹಾಗೆ ಆಕೆ ಆಸ್ಪತ್ರೆಯಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಫ್ಯಾಷನ್ ಇವೆಂಟ್ ಒಂದನ್ನು ಮುಗಿಸಿಕೊಂಡು ನಟಿ ಮರಳುತ್ತಿದ್ದಾಗ ಅವರ ಕಾರು ಎರಡು ಕಾರುಗಳ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಪ್ರಕರಣದ ಕುರಿತು ಪರಿಶೀಲನೆ ನಡೆಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.