ಬಿಕಿನಿ ಹಾಕೊಂಡು ಬಾ ನೋಡ್ಬೇಕು... ಹೆಸರಾಂತ ನಿರ್ದೇಶಕನ ಕರಾಳ ಮುಖ ಬಯಲು ಮಾಡಿದ 'ಶೌರ್ಯ' ಬೆಡಗಿ

ನಟಿ ಮದಲಸಾ ಶರ್ಮಾ
ನಟಿ ಮದಲಸಾ ಶರ್ಮಾ
Published on

ಪ್ರಮುಖ ಮುಖ್ಯಾಂಶಗಳು

  • ಸ್ಯಾಂಡಲ್​​ವುಡ್​ನಲ್ಲಿ ನಟ ದರ್ಶನ್​ ಜೊತೆಗೆ 'ಶೌರ್ಯ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯ
  • ಬಾಲಿವುಡ್​ನಲ್ಲಿ ಹೆಚ್ಚು ಗುರುತಿಸಿಕೊಂಡಿರುವ ನಟಿ ಮದಲಸಾ ಶರ್ಮಾ
  • ಬಿಕಿನಿ ಹಾಕಿಕೊಂಡು ಬಾ ಎಂದ ನಿರ್ದೇಶಕನ ಮಾತಿಗೆ ಖಡಕ್ ಆಗಿ ಉತ್ತರಿಸಿದ್ದ ಚೆಲುವೆ ಈಕೆ
ಮುಂಬೈ: ಹಿಂದಿ ಚಿತ್ರೋದ್ಯಮ ಸೇರಿದಂತೆ ಕನ್ನಡದಲ್ಲಿ ನಟ ದರ್ಶನ್​ ಅವರ ಶೌರ್ಯ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ನಟಿ ಮದಲಸಾ ಶರ್ಮಾ, ತಮಗೆ ಸ್ಟಾರ್ ನಿರ್ದೇಶಕನೊಬ್ಬ ಕೇಳಿದ ವಿಚಿತ್ರ ಡಿಮಾಂಡ್​ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.
'ದಿ ಮೇಲ್​ ಫೆಮಿನಿಸ್ಟ್'​ ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ ಹಾಟ್​ ಬ್ಯೂಟಿ, ಹೆಸರಾಂತ ನಿರ್ದೇಶಕನಿಂದಲೇ ನನಗೆ ಕಹಿ ಅನುಭವ ಎದುರಾಯಿತು. ಅದು ಒಂದು ಸಿನಿಮಾದ ಮೀಟಿಂಗ್​​ ಆಗಿತ್ತು. ಆ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡುವುದಾಗಿ ಕರೆಸಿದ್ದರು. ಆಗ ನನಗೆ ಕೇವಲ 19 ವರ್ಷ ವಯಸ್ಸು. ಅವರು ನನ್ನ ಕರೆಸುವ ಮುನ್ನ ನಟಿಗೆ ಬಿಕಿನಿ ಧರಿಸಲು ಓಕೆ ಅನ್ನೋದಿದ್ದರೆ ಹೇಳಿ ಎಂದಿದ್ದರು. ನಾನು ಕಥೆಯಲ್ಲಿದ್ದರೆ ಅಥವಾ ಕಥೆಗೆ ಅದು ಅಗತ್ಯವಿದ್ದರೆ, ನನಗೇನು ಅಭ್ಯಂತರವಿಲ್ಲ ಎಂದು ಮೊದಲು ಸ್ಟೋರಿ ಹೇಳಿ ಎಂದೆ.
"ನಾನು ಆಗಲೇ ಸ್ಮಾರ್ಟ್ ಇದ್ದೆ. ನಿಜಕ್ಕೂ ಕಥೆಯಲ್ಲಿ ಎಲ್ಲಾದರೂ ಬಿಕಿನಿ ಅವಶ್ಯಕತೆ ಇದೆಯೇ ಎಂದು ಚೆಕ್​ ಮಾಡಲು ನಿರ್ದೇಶಕರಿಗೆ ಕಥೆ ಹೇಳುವಂತೆ ಹೇಳಿದೆ. ಆದರೆ, ಅವರು ನೀವು ಬಿಕಿನಿ ಹಾಕಿಕೊಂಡು ನನ್ನ ಮುಂದೆ ಬನ್ನಿ. ನಿಮಗೆ ಅದು ಕಮ್​ಫೋರ್ಟ್​ ಆಗುತ್ತೋ, ಇಲ್ಲವೋ ಮತ್ತೆ ನಿಮ್ಮ ಬಾಡಿ ಲಾಂಗ್ವೇಜ್​ ಹೇಗಿರುತ್ತೆ ನಾನು ನೋಡಬೇಕು ಎಂದರು. ಇದಕ್ಕೆ ತಕ್ಷಣವೇ ಆಗಲ್ಲ ಸರ್​ ಎಂದುಬಿಟ್ಟೆ. ನನ್ನ ಕೆಲಸ ಏನಿದ್ದರೂ ನಟಿಸುವುದಷ್ಟೇ. ಬಿಕಿನಿ ಪಾತ್ರದಲ್ಲಿದ್ದರೆ ಓಕೆ. ಆದರದು, ಕಥೆಯಲ್ಲೇ ಇಲ್ಲ" ಎಂದು ಅವರಿಗೆ ಮುಖಕ್ಕೆ ಹೊಡೆದಂತೆ ಹೇಳಿದೆ ಎಂದರು.
"ಸೀರೆ ಅಥವಾ ಲೆಹೆಂಗಾ ಹಾಕಿಕೊಂಡು ಕ್ಯಾಮರಾ ಮುಂದೆ ಬನ್ನಿ ಎಂದರೆ ಓಕೆ. ಆದರೆ, ಬಿಕಿನಿ ಧರಿಸಿ, ನಿಮ್ಮ ಮುಂದೆ ಬರಬೇಕು ಎಂಬುದು ನಾಟ್​ ಓಕೆ. ನನ್ನ ಪ್ರತಿಭೆಯನ್ನು ಗುರುತಿಸಿ, ಚಿತ್ರಕ್ಕೆ ಆಯ್ಕೆ ಮಾಡುವುದಾದರೆ ನಾನು ಬರುವೆ. ಇಲ್ಲವಾದರೆ, ನನಗೆ ಹೊರಗೆ ಹೋಗುವುದು ಗೊತ್ತು ಎಂದು ಹೇಳಿ, ಆ ಪ್ರಾಜೆಕ್ಟ್​ನಿಂದ ಎಕ್ಸಿಟ್​ ಆದೆ" ಎಂದಿದ್ದಾಗಿ ಸಂದರ್ಶನದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.
ನಟಿಯ ಈ ಮಾತುಗಳು ಅವರ ಅಭಿಮಾನಿಗಳು ಮತ್ತು ಸಿನಿಪ್ರಿಯರ ಹುಬ್ಬೇರಿಸಿದೆ. ತಮ್ಮ ಹೇಳಿಕೆಯಲ್ಲಿ ಎಲ್ಲಿಯೂ ಆತ ಯಾರು? ಯಾವ ಸಿನಿಮಾದ ನಿರ್ದೇಶಕ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net