ಎರಡು ದಿನಗಳ ಹಿಂದೆ ಸೌತ್ ನಟಿ ಖುಷ್ಬೂ ತಮ್ಮ ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅನುಯಾಯಿಗಳಿಗೆ ಅವರು ಕರೊನಾ ಪಾಸಿಟಿವ್ ಎಂದು ತಿಳಿಸಿದ್ದರು. ತಮ್ಮ ಫೋಟೋವೊಂದನ್ನು ಹಂಚಿಕೊಂಡು, 'ಕೊನೆಯ 2 ಅಲೆಗಳನ್ನು ತಪ್ಪಿಸಿಕೊಂಡು, ಈಗ ಕರೊನಾಗೆ ಸಿಕ್ಕಿಬಿದ್ದಿದ್ದೇನೆ. ಹಾಗಾಗಿ, ನಾನು ನನ್ನನ್ನು ಪ್ರತ್ಯೇಕಿಸಿಕೊಂಡಿದ್ದೇನೆ. ನೀವು ಕರೊನಾಗೆ ಪರೀಕ್ಷಿಸಿಕೊಂಡು ಹುಷಾರಾಗಿರಿ' ಎಂಬ ಕ್ಯಾಪ್ಷನ್ ಕೊಟ್ಟಿದ್ದರು.