

ಬೆಂಗಳೂರು: ಮಹಾನಟಿ ಎಂದೂ ಖ್ಯಾತಿ ಪಡೆದಿರುವ ನಟಿ ಕೀರ್ತಿ ಸುರೇಶ್, ತಮ್ಮ ನಿಕಟ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಮಾತ್ರವಲ್ಲ, ಎಲ್ಲ ಮುನ್ನೆಚ್ಚರಿಕೆ ವಹಿಸಿದ್ದರೂ ಹೀಗಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಹೇಳಿಕೊಳ್ಳಲು ಕಾರಣ, ಕರೊನಾ.
ಹೌದು.. ನಟಿ ಕೀರ್ತಿ ಸುರೇಶ್ ಕೂಡ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ನಾನು ಸೋಂಕಿಗೆ ಒಳಗಾಗಿದ್ದು, ಲಘುವಾದ ಲಕ್ಷಣಗಳು ಕಾಣಿಸಿಕೊಂಡಿವೆ. ಎಲ್ಲ ಮುನ್ನೆಚ್ಚರಿಕೆ ವಹಿಸಿದ್ದರೂ ಪಾಸಿಟಿವ್ ಆಗಿರುವುದು ನೋಡಿದರೆ, ಕೋವಿಡ್ ಸೋಂಕು ಎಷ್ಟು ತೀವ್ರಗತಿಯಲ್ಲಿ ಹರಡುತ್ತಿದೆ ಎಂಬುದು ತಿಳಿದುಬರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ತಾವು ಈಗಾಗಲೇ ಐಸೋಲೇಷನ್ಗೆ ಒಳಗಾಗಿರುವುದನ್ನು ಹೇಳಿಕೊಂಡಿರುವ ಅವರು, ಲಸಿಕೆ ತೆಗೆದುಕೊಂಡಿರದವರು ಆದಷ್ಟು ಬೇಗ ಲಸಿಕೆ ತೆಗೆದುಕೊಳ್ಳುವಂತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತವಾಗಿ ಇರುವಂತೆ ಕಿವಿಮಾತು ಹೇಳಿದ್ದಾರೆ.