

ಕಳೆದ ವರ್ಷದ ಆರಂಭದಲ್ಲೇ ಮಣಿಕರ್ಣಿಕಾ ಫಿಲಂಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದರು ಕಂಗನಾ ರಣಾವತ್. ಆದರೆ, ಈ ಸಂಸ್ಥೆಯಿಂದ ಯಾವುದೇ ಚಿತ್ರ ನಿರ್ವಣವಾಗಿರಲಿಲ್ಲ.
ಈಗ ಓವರ್ ದಿ ಟಾಪ್ಗೆ (ಓಟಿಟಿ) ಹೊಸ ಚಿತ್ರವೊಂದನ್ನು ನಿರ್ವಿುಸುವುದಾಗಿ ಕಂಗನಾ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮಣಿಕರ್ಣಿಕಾ ಫಿಲಂಸ್ ಸಂಸ್ಥೆಯ ಲೋಗೋ ಅನಾವರಣ ಮಾಡಿದ್ದಾರೆ. ಅಂದಹಾಗೆ, ಮಣಿಕರ್ಣಿಕಾ ಫಿಲಂಸ್ನಡಿ ಕಂಗನಾ ನಿರ್ವಿುಸುತ್ತಿರುವ ಹೊಸ ಚಿತ್ರದ ಹೆಸರು ‘ಟೀಕು ವೆಡ್ಸ್ ಶೇರು’. ಇದೊಂದು ಲವ್ಸ್ಟೋರಿಯಾಗಿದ್ದು, ಈ ಚಿತ್ರದ ಮೂಲಕ ಹೊಸಬರನ್ನು ಪರಿಚಯಿಸಲಾಗುತ್ತಿದೆಯಂತೆ.
ಸದ್ಯಕ್ಕೆ, ಚಿತ್ರದ ಹೆಸರು ಮಾತ್ರ ಬಹಿರಂಗವಾಗಿದ್ದು, ಯಾರೆಲ್ಲ ನಟಿಸುತ್ತಾರೆ ಮತ್ತು ಯಾರು ನಿರ್ದೇಶನ ಮಾಡುತ್ತಾರೆ ಎಂಬ ವಿಷಯವನ್ನು ಸದ್ಯಕ್ಕೆ ರಹಸ್ಯವಾಗಿ ಇಡಲಾಗಿದೆ. ಇನ್ನು, ಕಂಗನಾ ಅಭಿನಯದ ‘ಥಲೈವಿ’ ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಏಪ್ರಿಲ್ 23ರಂದು ಬಿಡುಗಡೆಯಾಗಬೇಕಿತ್ತು. ಚಿತ್ರ ಅನಿರ್ಧಿಷ್ಟಾವಧಿ ಮುಂದಕ್ಕೆ ಹೋಗಿದ್ದು, ಹೊಸ ದಿನಾಂಕ ಇನ್ನಷ್ಟೇ ಗೊತ್ತಾಗಬೇಕಿದೆ.