

! ಹರ್ಷವರ್ಧನ್ ಬ್ಯಾಡನೂರು
"ಅಗ್ನಿಸಾಕ್ಷಿ' ಸೀರಿಯಲ್ ಖ್ಯಾತಿಯ ನಟಿ ಇಷಿತಾ ವರ್ಷ ಆ ಬಳಿಕ "ಸ್ವಾರ್ಥರತ್ನ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಅದರ ನಡುವೆ "ಕುಕ್ಕು ವಿತ್ ಕಿರಿಕ್ಕು', "ರಾಜಾ ರಾಣಿ', "ಡಾನ್ಸಿಂಗ್ ಚಾಂಪಿಯನ್' ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಹೊಸ ಪ್ರಾಜೆಕ್ಟ್ ಸೈನ್ ಮಾಡಬೇಕಿದ್ದು, ಅದರ ನಡುವೆ ಇಷಿತಾ ಹೊಸ ಹವ್ಯಾಸ ರೂಢಿಸಿಕೊಂಡಿದ್ದಾರೆ. ದೇಶ, ವಿದೇಶಗಳನ್ನು ಸುತ್ತುತ್ತಾ ಕಾಡು, ಮೇಡುಗಳನ್ನು ಅಲೆಯುತ್ತಾ, ವನ್ಯಮೃಗಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ. ವೈಲ್ಡ್ಲ್ೈ ೋಟೋಗ್ರಫಿ ಬಗ್ಗೆ ವಿಜಯವಾಣಿ ಜತೆ ಮುಕ್ತವಾಗಿ ಮಾತನಾಡಿದ್ದಾರೆ ಇಷಿತಾ ವರ್ಷ.