ಹರ್ಷಿಕಾ ಪೂಣಚ್ಚ ಹೀಗೊಂದು ಚಾಲೆಂಜ್​ ಹಾಕಿದ್ದಾರೆ; ಇಷ್ಟ ಆದ್ರೆ ನೀವೂ ಸ್ವೀಕರಿಸಿ; ಇದು ಫ್ಯಾಮಿಲಿಗೆ ಸಂಬಂಧಿಸಿದ್ದು

harshika
Published on

ಬೆಂಗಳೂರು: ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಮಹಿಳೆಯರು ಒಂದಿಲ್ಲೊಂದು ಚಾಲೆಂಜ್ ಹಾಕಿಕೊಳ್ಳುತ್ತ ಟೈಪಾಸ್​ ಮಾಡುತ್ತಿದ್ದಾರೆ. ಅದರಲ್ಲೂ ಸೀರೆ ಚಾಲೆಂಜ್​, ಬಗೆಬಗೆ ಅಡುಗೆ ಚಾಲೆಂಜ್​ ಸ್ವೀಕರಿಸಿ ಅದನ್ನು ಮತ್ತೊಬ್ಬರಿಗೆ ವರ್ಗಾಯಿಸುತ್ತಿದ್ದಾರೆ. ಇದೀಗ ನಟಿ ಹರ್ಷಿಕಾ ಪೂಣಚ್ಚ ಹೊಸದೊಂದು ಚಾಲೆಂಜ್ ಎಸೆದಿದ್ದಾರೆ. ಅದುವೇ ಫ್ಯಾಮಿಲಿ ಫೋಟೋ ಚಾಲೆಂಜ್​.
ಹೌದು, ಅಮ್ಮ ಮತ್ತು ಸಾಕುನಾಯಿಗಳೊಂದಿಗಿನ ಫೋಟೋವನ್ನು ಶೇರ್​ ಮಾಡಿಕೊಂಡಿರುವ ಹರ್ಷಿಕಾ, ಇದೇ ನನ್ನ ಮುದ್ದಾದ ಕುಟುಂಬ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಫ್ಯಾಮಿಲಿ ಬಗ್ಗೆಯೂ ಹೇಳಿಕೊಂಡಿದ್ದಾರೆ. ‘ಈ ಹೊತ್ತಿನಲ್ಲಿ ಅವಶ್ಯವಾಗಿ ಸ್ವೀಕರಿಸಬೇಕಾದ ಚಾಲೆಂಜ್​ ಅಂದರೆ ಅದು ಫ್ಯಾಮಿಲಿ ಫೋಟೋ ಚಾಲೆಂಜ್​. ಕುಟುಂಬದೊಟ್ಟಿಗೆ ಫೋಟೋ ತೆಗೆದುಕೊಂಡಿರುವುದೇ ಇಲ್ಲ. ಹಾಗಾಗಿ ಒಟ್ಟಾಗಿ ಒಂದು ಫೋಟೋ ಫ್ರೇಮ್​ಗೆ ಪೋಸ್​ ಕೊಡಿ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ, ನಿಮ್ಮ ಸ್ನೇಹಿತರನ್ನೂ ಆಹ್ವಾನಿಸಿ’ ಎಂದಿದ್ದಾರೆ ಹರ್ಷಿಕಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net