ಅವನು ಕೊಟ್ಟ ಕಾಟ ಅಷ್ಟಿಷ್ಟಲ್ಲ; ಮಾಜಿ ಪ್ರಿಯಕರನ ಬಗ್ಗೆ ಮೌನ ಮುರಿದ "ನಿನ್ನಿಂದಲೇ' ನಟಿ ಎರಿಕಾ

zx
Published on

ಸಿನಿಮಾ ತಾರೆಯರ ವಯಕ್ತಿಕ ಜೀವನದಲ್ಲಿ ಪ್ರೀತಿ, ಬ್ರೇಕಪ್​, ಮದುವೆ, ವಿಚ್ಛೇದನ ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ದಿನಕ್ಕೊಂದು ಪ್ರೀತಿ&ಗಲಾಟೆ ಸುದ್ದಿಗಳು ಸದ್ದು ಮಾಡುತ್ತಿರುತ್ತವೆ. ಆದರೆ, ಕನ್ನಡದ "ನಿನ್ನಿಂದಲೇ', "ಬುಗುರಿ' ಸೇರಿ ತೆಲುಗು, ತಮಿಳು, ಹಿಂದಿಯಲ್ಲೂ ನಟಿಸಿರುವ ಎರಿಕಾ ರ್ನಾಂಡಿಸ್​, ತಮ್ಮ ಖಾಸಗಿ ಜೀವನದ ಬಗ್ಗೆ ಮೊದಲಿನಿಂದಲೂ ಮೌನವಹಿಸಿದ್ದರು. ಕೆಲ ವರ್ಷಗಳಿಂದ ಹಿಂದಿ ಕಿರುತೆರೆಯಲ್ಲಿ ಬಿಜಿಯಾಗಿದ್ದು, ಮುಂಬೈನಲ್ಲಿ ಸೆಟಲ್​ ಆಗಿರುವ ಅವರು, ಇದೇ ಮೊದಲ ಬಾರಿಗೆ ತಮ್ಮ ಲವ್​ ಮತ್ತು ಬ್ರೇಕಪ್​ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

"ನನ್ನ ಜೀವನದಲ್ಲಿ ಎದುರಿಸಿದ ಆಘಾತಗಳು ಮತ್ತು ಆದ ಅನುಭವಗಳೇ ನನ್ನನ್ನು ಇಂದಿನ ವ್ಯಕ್ತಿಯಾಗಿಸಿವೆ. ಪೊಲೀಸರ ಬಳಿ ಹೋದರೆ, ಅದೇ ದೊಡ್ಡ ಸುದ್ದಿಯಾಗುತ್ತದೆ. ಜತೆಗೆ ನನಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯೂ ಇಲ್ಲ. ಹೀಗಾಗಿ ನಾನು ಹಿಂದಿನ ರಿಲೇಷನ್​ಶಿಪ್​ನಲ್ಲಿ ಎದುರಿಸಿದ ದೌರ್ಜನ್ಯದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಬದಲಾಗಿ ಅದನ್ನು ನಾನೇ ಎದುರಿಸಿದೆ, ಅನುಭವಿಸಿದೆ ಕೊನೆಗೆ ಅದರಿಂದ ಹೊರಬಂದೆ. ಆದರೆ, ಅದರಿಂದ ಹೊರಬಂದ ಬಳಿಕವೂ ಆ ಗಾಯದ ಕಲೆ ಮಾತ್ರ ನನ್ನಲ್ಲಿ ಹಾಗೇ ಉಳಿದಿದೆ' ಎಂದು ಮಾಜಿ ಪ್ರಿಯಕರನ ಹೆಸರು ಹೇಳದೆಯೇ, ತಾವು ಎದುರಿಸಿದ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾರೆ ನಟಿ ಎರಿಕಾ ರ್ನಾಂಡಿಸ್​.

ಸದ್ಯ ಎರಿಕಾಗೆ ಸಮಸ್ಯೆ ಮಾಡಿದ ಆ ಮಾಜಿ ಪ್ರಿಯಕರ ಯಾರು ಎಂಬುದರ ಬಗ್ಗೆ ಜಾಲತಾಣದಲ್ಲಿ ನಟಿಯ ಅಭಿಮಾನಿಗಳು ಚರ್ಚೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net