ಹೊಸ ವರ್ಷದ ಅಂಗವಾಗಿ ಇನ್​ಸ್ಟಾಗ್ರಾಮ್​ನಲ್ಲಿ ಮೀಸೆ ಹೊಂದಿರುವ ಅಪರೂಪದ ಬಾಲ್ಯದ ಚಿತ್ರ ಅಪ್​ಲೋಡ್​ ಮಾಡಿದ ದೀಪಿಕಾ ಪಡುಕೋಣೆ

depika padukone
Published on

ಮುಂಬೈ: ನಟಿ ದೀಪಿಕಾ ಪಡುಕೋಣೆ ಹೊಸ ವರ್ಷದ ಶುಭಾಶಯ ಕೋರಿ ತಮ್ಮ ಬಾಲ್ಯದ ಅಪರೂಪದ ಚಿತ್ರವೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಬಾಲ್ಯದಲ್ಲಿ ಮೀಸೆ ಅಂಟಿಸಿಕೊಂಡಿರುವ ಚಿತ್ರವನ್ನು ಅವರು ಅಪ್​ಲೋಡ್​ ಮಾಡಿದ್ದಾರೆ. ನೀವು ಯಾವಾಗಲೂ ಚಿಂತನೆ ಮತ್ತು ಕ್ರಿಯೆಯ ಸ್ಪಷ್ಟತೆಯನ್ನು ಹೊಂದಿರಿ. 2020 ಸಂತೋಷ ತರಲಿ ಎಂದು ಶೀರ್ಷಿಕೆ ಬರೆದಿದ್ದಾರೆ.

ದೀಪಿಕಾ ಪಡುಕೋಣೆ ಅವರ ಅಪರೂಪದ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ಅಪ್​ಲೋಡ್​ ಆಗುತ್ತಿದ್ದಂತೆ 5 ಲಕ್ಷ 66 ಸಾವಿರ ಮಂದಿ ಫೋಟೋವನ್ನು ಲೈಕ್​ ಮಾಡಿದ್ದಾರೆ.

ಅಭಿಮಾನಿಯೊಬ್ಬರು ಎಂತಹ ಮೋಹನಾಂಗಿ ಎಂದು ಹೊಗಳಿದ್ದಾರೆ. ಇನ್ನೊಬ್ಬರು "ಯಾವಾಗಲೂ ಸುಂದರವಾಗಿರುವ ದೀಪಿಕಾ ಪಡುಕೋಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ನೀವು ಪತಿ ರಣವೀರ್​ ಸಿಂಗ್​ಗಿಂತ ಉತ್ತಮವಾದ ಮೀಸೆ ಹೊಂದಿದ್ದೀರಿ ಎಂದು ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net