ಮನೆಯಲ್ಲಿಯೇ ಅದ್ದೂರಿ ಯುಗಾದಿ: ಅಪೂರ್ವ

Roopika
Published on

ನಮ್ಮ ಮನೆಯಲ್ಲಿ ಹಬ್ಬ ಅಂದರೆ ಆಚರಣೆ ಅದ್ದೂರಿಯಾಗಿಯೇ ಇರುತ್ತದೆ. ಎರಡ್ಮೂರು ದಿನಕ್ಕೂ ಮೊದಲೇ ಸಡಗರ ಕಳೆಗಟ್ಟುತ್ತದೆ. ಮನೆಯ ಶುಚಿ ಮತ್ತು ಅಲಂಕಾರವೂ ನಡೆಯುತ್ತದೆ. ಹಬ್ಬದ ಸಂದರ್ಭದಲ್ಲಿ ಅಮ್ಮನದ್ದೇ ಬಹುಪಾಲು ಕೆಲಸ. ನನ್ನದು ಸಿನಿಮಾ ಕೆಲಸವಿದ್ದರೆ, ಆಚರಣೆಯೂ ಮಿಸ್ಸಿಂಗ್. ಈ ಸಲ ಶೂಟಿಂಗ್ ಕೆಲಸಗಳಿಲ್ಲ. ಹಾಗಾಗಿ ಅಮ್ಮನ ಜತೆಗೆ ಮನೆಯಲ್ಲಿಯೇ ಹಬ್ಬದಾಚರಣೆ ನಡೆಯಲಿದೆ. ಅಡುಗೆಯ ಉಸ್ತುವಾರಿ ಅಮ್ಮನದ್ದು.

ಸೀರೆಯುಟ್ಟು, ಕುಟುಂಬದೊಟ್ಟಿಗೆ ಹೋಳಿಗೆ ಊಟ ಸವಿಯುವುದಷ್ಟೇ ನನ್ನ ಕೆಲಸ. ಆದರೆ, ಚಿಕ್ಕಂದಿನಲ್ಲಿನ ಯುಗಾದಿ ಸಡಗರ ಈಗಿಲ್ಲ. ಅದರಲ್ಲೂ ಕರೊನಾ ಬಂದ ಮೇಲೆ ಹಬ್ಬಗಳು ಮನೆಗಷ್ಟೇ ಸೀಮಿತವಾಗಿವೆ. ಸಂಸ್ಕಾರ, ಸಂಸ್ಕೃತಿ, ಆಚರಣೆ ಪದ್ಧತಿಗಳೆಲ್ಲ ಮಾಯವಾಗುತ್ತಿವೆ. ಹಾಗಾಗಬಾರದೆಂದರೆ ಹಬ್ಬಗಳ ಮಹತ್ವವನ್ನು ಮಕ್ಕಳಿಗೂ ತಿಳಿಸಿಕೊಡಬೇಕಾದ ಜರೂರತ್ತಿದೆ.

| ಅಪೂರ್ವ ನಟಿ-ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net