ಸೈಜ್ ಜೀರೋ ಡೈರೆಕ್ಟರನ್ನು ಟಾಲಿವುಡ್​ ನಟಿ ಅನುಷ್ಕಾ ಶೆಟ್ಟಿ ವಿವಾಹವಾಗ್ತಾರಾ?

Anuskha Shetty and Size Zero 4 MAR 20
Published on

ಹೈದರಾಬಾದ್​: ಸೈಜ್ ಜೀರೋ ಸಿನಿಮಾದ ನಿರ್ದೇಶಕನನ್ನು ಬಾಹುಬಲಿ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ ವಿವಾಹವಾಗ್ತಾರಾ? ಹೀಗೊಂದು ಗಾಸಿಪ್ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ. ಆದರೆ, ಇದನ್ನು ದೃಢೀಕರಿಸುವುದಕ್ಕೋ, ನಿರಾಕರಿಸುವುದಕ್ಕೋ ಅನುಷ್ಕಾ ಅಥವಾ ಸೈಜ್ ಜೀರೋ ನಿರ್ದೇಶಕ ಪ್ರಕಾಶ್ ಕೋವೇಲಮುಡಿ ಮುಂದಾಗಿಲ್ಲ.

ಅನುಷ್ಕಾ ಶೆಟ್ಟಿ ವಿವಾಹಕ್ಕೆ ಸಂಬಂಧಿಸಿದ ರೂಮರ್​ಗಳಿಗೇನೂ ಕೊರತೆ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ರೂಮರ್​ಗಳದ್ದೇ ಹವಾ. ಬಾಹುಬಲಿ ಸಿನಿಮಾದ ನಾಯಕ ಪ್ರಭಾಸ್ ಜತೆಗೂ ಅನುಷ್ಕಾ ವಿವಾಹದ ವಿಚಾರ ತಳುಕುಹಾಕಿಕೊಂಡಿತ್ತು. ಈಗ ಸೈಜ್ ಜೀರೋ ಸಿನಿಮಾ ನಿರ್ದೇಶಕ ಪ್ರಕಾಶ್ ಕೋವೇಲಮುಡಿ ಹೆಸರಿನ ಜತೆಗೆ ಅನುಷ್ಕಾ ಹೆಸರು ಸೇರಿಕೊಂಡಿದೆ. ಪ್ರಕಾಶ್ ಕೋವೇಲ ಮುಡಿ ವಿವಾಹಿತರಾಗಿದ್ದು, ಲೇಖಕಿ ಕನಿಕಾ ಧಿಲ್ಲೋನ್​ರನ್ನು ವಿವಾಹವಾಗಿದ್ದರು. ಆದರೆ, ಇತ್ತೀಚೆಗೆ ಈ ಸಂಬಂಧ ಮುರಿದುಬಿದ್ದಿದೆ. ಹೀಗಾಗಿ ಅನುಷ್ಕಾ ವಿವಾಹದ ರೂಮರ್​ಗೆ ಪ್ರಕಾಶ್ ಹೆಸರು ಜೋಡಿಕೊಂಡಿದೆ.

ತೆಲುಗು, ತಮಿಳು ಸಿನಿಮಾ ಕ್ಷೇತ್ರಗಳಲ್ಲಿ ಲೇಡಿ ಸೂಪರ್​​ಸ್ಟಾರ್ ಇಮೇಜ್ ಹೊಂದಿರುವ ಅನುಷ್ಕಾ ಅಭಿನಯಿಸಿದ ಇತ್ತೀಚಿನ ತೆಲುಗು ಸಿನಿಮಾ ಭಾಗಮತಿ, ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಝಾನ್ಸಿ ರಾಣಿಯಾಗಿಯೂ ಕಾಣಿಸಿಕೊಂಡಿದ್ದರು. ಈ ವರ್ಷ ಏಪ್ರಿಲ್​ನಲ್ಲಿ ಅವರ ಅಭಿನಯದ ನಿಶಬ್ಧ ಸಿನಿಮಾ ತೆರೆ ಕಾಣಲಿದೆ. (ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net