ನಿರ್ಮಾಣಕ್ಕಿಳಿದ ನಟಿ ಅನಿತಾ ಭಟ್; ಕಡಲತೀರದ ಕಥೆ 'ಸಮುದ್ರಂ'

Anitha Bhat
Published on

ಬೆಂಗಳೂರು: ಅನಿತಾ ಭಟ್ ನಾಯಕಿಯಾಗಿ, ವಿಶೇಷ ಪಾತ್ರಗಳಲ್ಲಿ ಗಮನ ಸೆಳೆದಿದ್ದಾರೆ. ಇದೀಗ ಮೊದಲ ಬಾರಿ ನಿರ್ವಪಕಿಯಾಗಿಯೂ ಅವರು ಬಡ್ತಿ ಪಡೆಯುತ್ತಿದ್ದಾರೆ. ಆ ಚೊಚ್ಚಲ ಚಿತ್ರದ ಶೂಟಿಂಗ್ ಸಹ ಮುಗಿದಿದ್ದು, ಸಿನಿಮಾ ಸೆನ್ಸಾರ್ ಅಂಗಳದಲ್ಲಿದೆ. ಆ ಸಿನಿಮಾ ಹೆಸರು ‘ಸಮುದ್ರಂ’. ಅನಿತಾ ಭಟ್ ಕ್ರಿಯೇಷನ್ಸ್, ರಾಜಲಕ್ಷ್ಮೀ ಪ್ರೊಡಕ್ಷನ್ಸ್ ಮತ್ತು ಡಾಟ್ ಟಾಕೀಸ್ ಜಂಟಿಯಾಗಿ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿವೆ. ಹಾಗಾದರೆ ಏನಿದು ಸಿನಿಮಾ? ಇದೆಲ್ಲವನ್ನು ಅನಿತಾ ಭಟ್ ಅವರೇ ವಿವರಿಸಿದ್ದಾರೆ.

‘‘ಸಮುದ್ರಂ’ ಶೀರ್ಷಿಕೆಗೆ ತಕ್ಕಂತೆ ಇದು ಕಡಲ ತೀರದ ಬಳಿ ನಡೆಯುವ ಕಥೆ. ಮಾನವ ಕಳ್ಳಸಾಗಾಣಿಕೆ, ರೌಡಿಸಂ ಹಿನ್ನೆಲೆಯಲ್ಲಿ ಸಾಗಲಿದೆ. ಈ ಚಿತ್ರದಲ್ಲಿ ಗೃಹಿಣಿಯಾಗಿ ನಾನು ನಟಿಸಿದ್ದು, ಒಂದು ಬದಲಾವಣೆಯಿಂದ ಹೇಗೆ ಸಮಾಜದ ವಿರುದ್ಧವೇ ತಿರುಗಿ ಬೀಳುತ್ತೀನಿ ಎಂಬುದನ್ನು ಸಿನಿಮಾದಲ್ಲಿ ನೋಡಬಹುದು’ ಎನ್ನುತ್ತಾರೆ. ಶಿವಧ್ವಜ್, ರಾಜಕಿಶೋರ್, ಸ್ವಾತಿ ಬಂಗೇರಾ ನಟಿಸಿರುವ ಈ ಚಿತ್ರದ ಬಹುತೇಕ ಶೂಟಿಂಗ್ ಬ್ರಹ್ಮಾವರ, ಉಡುಪಿ, ಸಕಲೇಶಪುರ ಸುತ್ತಮುತ್ತ ಮಾಡಲಾಗಿದೆ. ಚಿತ್ರಕಥೆ, ಸಂಭಾಷಣೆ, ಸಂಕಲನ, ಛಾಯಾಗ್ರಹಣವನ್ನು ರಿಷಿಕೇಶ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net