ವೆಬ್​ಸಿರೀಸ್​ನತ್ತ ಅನಸೂಯ..

anasuya
Published on

‘ಪುಷ್ಪ’ ಚಿತ್ರದಲ್ಲಿ ಗಮನಸೆಳೆದ ಕಲಾವಿದರ ಪೈಕಿ ದಾಕ್ಷಾಯಿಣಿ ಪಾತ್ರ ಮಾಡಿರುವ ಅನಸೂಯ ಭಾರದ್ವಾಜ್ ಸಹ ಒಬ್ಬರು. ಮೂಲತಃ ನಟಿ-ನಿರೂಪಕಿಯಾಗಿರುವ ಅನಸೂಯ, ಇದೀಗ ವೆಬ್ ಸರಣಿಯತ್ತ ಮುಖ ಮಾಡಿದ್ದಾರೆ. ಇದುವರೆಗೂ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರು, ವೆಬ್​ಸಿರೀಸ್​ನಲ್ಲಿ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ.

ಅನಸೂಯ ಭಾರದ್ವಾಜ್ ಇದುವರೆಗೂ ‘ಕ್ಷಣಂ’, ‘ರಂಗಸ್ಥಲಂ’ ಇತ್ತೀಚೆಗಷ್ಟೇ ರಿಲೀಸ್ ಆದ ‘ಪಕ್ಕಾ ಕಮರ್ಷಿಯಲ್’ ಸೇರಿದಂತೆ 15 ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ 37 ವರ್ಷದ ಈ ನಟಿ ನಾಯಕಿಯ ಪಾತ್ರದಲ್ಲಿ ನಟಿಸುವ ಮೂಲಕ ವೆಬ್​ಸಿರೀಸ್​ಗೆ ಪದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಇದು 1890ರ ದಶಕದಲ್ಲಿ ಗುರಜಾಡ ಅಪ್ಪಾರಾವ್ ಬರೆದಿದ್ದ ಈಗಲೂ ಜನಪ್ರಿಯವಾಗಿರುವ ‘ಕನ್ಯಾಸುಲಕಮ್ ಕಾದಂಬರಿ ಆಧಾರಿತವಾಗಿದ್ದು, ಅನಸೂಯ ಇಲ್ಲಿ ಮಧುರವಾಣಿ ಎಂಬ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಕೆಯ ಸುತ್ತ ಕಥೆ ಸುತ್ತುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಈ ವೆಬ್​ಸರಣಿಯ ಚಿತ್ರೀಕರಣ ಪ್ರಾರಂಭವಾಗಲಿದೆ. ವೆಬ್​ಸರಣಿ ಜೊತೆಗೆ ಅನುಸೂಯ ‘ಪುಷ್ಪ ದಿ ರೂಲ್’ಮತ್ತು ‘ರಂಗಮಾರ್ತಾಂಡ’ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net