ಓಟಿಟಿಗೆ ಅನನ್ಯಾ ಪಾಂಡೆ ಆಗಮನ; ‘ಕಾಲ್ ಮೀ ಬೇ’ ವೆಬ್​ಸರಣಿಯಲ್ಲಿ ನಟನೆ

Ananya
Published on

ನಟ ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆಯನ್ನು ಬಾಲಿವುಡ್​ಗೆ ನಟಿಯಾಗಿ ಪರಿಚಯಿಸಿದ್ದು ಕರಣ್ ಜೋಹರ್. ತಮ್ಮ ಧರ್ಮ ಪ್ರೊಡಕ್ಷನ್ಸ್​ನಲ್ಲಿ ನಿರ್ವಣವಾದ ‘ಸ್ಟೂಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ಅನನ್ಯಾಗೆ ಮೊದಲು ಅವಕಾಶ ನೀಡಿದವರು ಕರಣ್. ಈಗ ಅವರೇ ಅನನ್ಯಾರನ್ನು ಓಟಿಟಿಗೆ ಪರಿಚಯಿಸುವುದಕ್ಕೂ ಸಜ್ಜಾಗಿದ್ದಾರೆ. ಕರಣ್ ಒಡೆತನದ ಧರ್ವಟಿಕ್ ಎಂಟರ್​ಟೈನ್​ವೆುಂಟ್ ಸಂಸ್ಥೆಯು ಅಮೇಜಾನ್ ಪ್ರೖೆಮ್ೆ ‘ಕಾಲ್ ಮೀ ಬೇ’ ಎಂಬ ವೆಬ್​ಸೀರೀಸ್ ನಿರ್ಮಾಣ ಮಾಡುತ್ತಿದೆ. ಈ ಸರಣಿಯ ಮೂಲಕ ಮೊದಲ ಬಾರಿಗೆ ಅನನ್ಯಾ ವೆಬ್​ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಕಾಲ್ ಮೀ ಬೇ’ನಲ್ಲಿ ಅನನ್ಯಾ ದೊಡ್ಡ ಮನೆತನದ ಯುವತಿಯಾಗಿ ಅಭಿನಯಿಸುತ್ತಿದ್ದು, ದೊಡ್ಡ ವಿವಾದದಲ್ಲಿ ಆಕೆ ಸಿಕ್ಕಿಕೊಂಡಾಗ ಅದರಿಂದ ಹೇಗೆ ಹೊರಬರುತ್ತಾಳೆ ಮತ್ತು ತನ್ನನ್ನು ತಾನೇ ಹೇಗೆ ಕಂಡುಕೊಳ್ಳುತ್ತಾಳೆ ಎನ್ನುವುದನ್ನು ಹೇಳಲಾಗುತ್ತದಂತೆ. ‘ದೋಸ್ತಾನಾ 2’ ಚಿತ್ರವನ್ನು ನಿರ್ದೇಶಿಸಬೇಕಿದ್ದ ಕೋಲಿನ್ ಡಿ-ಕುನ್ಹ ಈ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ.

ಇದಲ್ಲದೆ, ಆಯುಷ್ಮಾನ್ ಖುರಾನಾ ಜತೆಗೆ ‘ಡ್ರೀಮ್ ಗರ್ಲ್ 2’ ಎಂಬ ಚಿತ್ರದಲ್ಲೂ ಅನನ್ಯಾ ನಟಿಸುತ್ತಿದ್ದಾರೆ. ಈ ಚಿತ್ರದ ಮುಗಿದ ನಂತರ ಅವರು ವೆಬ್​ಸರಣಿಯಲ್ಲೀ ಕಾಣಿಸಿಕೊಳ್ಳುತ್ತಿದ್ದು, ಮುಂದಿನ ವರ್ಷ ‘ಕಾಲ್ ಮೀ ಬೇ’ ಸ್ಟ್ರೀಮ್ ಆಗುವ ಸಾಧ್ಯತೆ ಇದೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net