ಆಲಿಯಾ ಜತೆ ಸಮಂತಾ ; ಚಾನ್ಸ್​ ಕೊಡುವಂತೆ ನಿರ್ದೇಶಕ ತ್ರಿವಿಕ್ರಮ್​ ಬಳಿ ಬಾಲಿವುಡ್​ ನಟಿಯ ಮನವಿ

sdedfsef
Published on

ಆಲಿಯಾ ಭಟ್​ ನಟಿಸಿರುವ, ವಸನ್​ ಬಾಲಾ ನಿರ್ದೇಶನದ ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾ "ಜಿಗ್ರಾ'. ಇತ್ತೀಚೆಗಷ್ಟೆ ಮುಂಬೈನಲ್ಲಿ ಪ್ರಿ&ರಿಲೀಸ್​ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶೇಷ ಅಂದರೆ ಕಾರ್ಯಕ್ರಮಕ್ಕೆ ತೆಲುಗು ನಟಿ ಸಮಂತಾ ಮತ್ತು "ಅಲಾ ವೈಕುಂಠಪುರಂಲೋ', "ಗುಂಟೂರು ಕಾರಂ' ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಕೂಡ ಆಗಮಿಸಿದ್ದರು.

ಸಮಂತಾ ಬಗ್ಗೆ ಆಲಿಯಾ, "ನೀವು ತೆರೆಯ ಮುಂದೆ ಮಾತ್ರವಲ್ಲ ತೆರೆಯ ಹಿಂದೆಯೂ ಹೀರೋ. ನಿಮ್ಮ ಪ್ರತಿಭೆ, ಛಲಕ್ಕೆ ನಾನು ಅಭಿಮಾನಿ. ಪುರುಷ ಪ್ರಧಾನ ಕ್ಷೇತ್ರದಲ್ಲಿ ಒಬ್ಬ ಮಹಿಳೆ ಬೆಳೆಯುವುದು ತುಂಬ ಕಷ್ಟ. ಆದರೆ, ಆ ವಿಷಯದಲ್ಲಿ ನೀವು ಪುರುಷರನ್ನೂ ಮೀರಿ ಬೆಳೆದಿದ್ದೀರಿ' ಎಂದರು.

ಜತೆಗೆ ನಿರ್ದೇಶಕ ತ್ರಿವಿಕ್ರಮ್​ ಬಳಿ, "ನಮ್ಮ ಸಿನಿಮಾ ಪ್ರಚಾರಕ್ಕೆ ಅಂತ ಹೀಗೆ ಹೇಳುತ್ತಿಲ್ಲ. ಆದರೆ, ನೀವು ಒಂದು ಚಿತ್ರದಲ್ಲಿ ನನಗೆ ಮತ್ತು ಸಮಂತಾಗೆ ಒಟ್ಟಿಗೆ ನಟಿಸಲು ಅವಕಾಶ ಕೊಡಬೇಕು. ಒಂದೇ ಚಿತ್ರದಲ್ಲಿ ಇಬ್ಬರು ನಟಿಯರಿದ್ದರೆ, ಅವರ ನಡುವೆ ಸ್ಪರ್ಧೆ ಏರ್ಪಡುತ್ತದೆ ಎಂಬ ಮಾತಿದೆ. ಆದರೆ, ಹಾಗೇನೂ ಇಲ್ಲ' ಎಂದು ಆಲಿಯಾ ಮನವಿ ಮಾಡಿಕೊಂಡಿದ್ದಾರೆ. ಅಂದಹಾಗೆ, "ಜಿಗ್ರಾ' ಇಂದು ರಿಲೀಸ್​ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net