ಬೆಂಗಳೂರು: ಗಿರಿರಾಜ್ ಬಿ.ಎಂ. ನಿರ್ದೇಶಿಸುತ್ತಿರುವ ಮಿಸ್ಟಿಕಲ್ ಥ್ರಿಲ್ಲರ್ ಡ್ರಾಮಾ "ರಾಮರಸ'. ಬಿಗ್ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್, ಪ್ರಜ್ವಲ್ ದೇವರಾಜ್, ಶರಣ್, ಹೆಬಾ ಪಟೇಲ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಇದೀಗ ಚಿತ್ರದ ತಾರಾಗಣ ಮತ್ತಷ್ಟು ಹಿಗ್ಗಿದೆ. ಕನ್ನಡದ "ರಣವಿಕ್ರಮ' ಚಿತ್ರದಲ್ಲಿ ಪುನೀತ್ ರಾಜಕುಮಾರ್ಗೆ ನಾಯಕಿಯಾಗಿ ಮಿಂಚಿದ್ದ ಅದಾ ಶರ್ಮಾ ಇದೀಗ "ರಾಮರಸ' ಮೂಲಕ 11 ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ವಾಪಸ್ಸಾಗಿದ್ದಾರೆ. ಗುರು ದೇಶಪಾಂಡೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ "ರಾಮರಸ' ಚಿತ್ರದಲ್ಲಿ ದೇವಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವ ಗುರು, ""ರಣವಿಕ್ರಮ' ಬಳಿಕ ಅದಾ ಕನ್ನಡದಲ್ಲಿ ನಟಿಸಿರಲಿಲ್ಲ. ಹಿಂದಿಯ "1920', "ಕಮಾಂಡೋ' ಸರಣಿ, "ದ ಕೇರಳ ಸ್ಟೋರಿ', "ಬಸ್ತರ್: ದ ನಕ್ಸಲ್ ಸ್ಟೋರಿ', ತೆಲುಗಿನ "ಸನ್ ಆ್ ಸತ್ಯಮೂರ್ತಿ' ಬಹುಭಾಷೆಗಳಲ್ಲಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ, ವೆಬ್ಸರಣಿಗಳು, ಮ್ಯೂಸಿಕ್ ವಿಡಿಯೋಗಳಲ್ಲಿ "ದ ಕೇರಳ ಸ್ಟೋರಿ' ಬಳಿಕ ಅವರು ಇಡೀ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ. ಸಮರ ಕೆಲ ಕಲಿತಿದ್ದಾರೆ. ಅವರು ಈ ಪಾತ್ರಕ್ಕೆ ಹೊಂದುತ್ತಾರೆ ಅಂತನ್ನಿಸಿ, ಸಂಪರ್ಕಿಸಿದೆವು. ಅವರೂ ಖುಷಿಯಿಂದ ಒಪ್ಪಿಕೊಂಡರು. ಅದಾ ಇಲ್ಲಿ ದೇವಿಯ ಪಾತ್ರದಲ್ಲಿ ನಟಿಸಿದ್ದು, 13 ದಿನಗಳ ಕಾಲ ಅವರ ಭಾಗದ ಚಿತ್ರೀಕರಣ ನಡೆಸಿದೆವು. ಸಿನಿಮಾಗೆ ಟರ್ನಿಂಗ್ ಪಾಯಿಂಟ್ ನೀಡುವ ಮುಖ್ಯ ಪಾತ್ರವದು. ಅವರು ಬರುವವರೆಗೂ ಕಥೆ ಒಂದು ರೀತಿಯಿದ್ದರೆ, ಅವರು ಬಂದ ಬಳಿಕ ಹೊಸ ರೂಪ ಪಡೆಯುತ್ತದೆ. ಹೀಗಾಗಿ ಅವರ ಪಾತ್ರದ ಬಗ್ಗೆ ಹೆಚ್ಚು ಈಗಲೇ ಹೇಳಲಾಗುವುದಿಲ್ಲ. ಈಗಾಗಲೇ ಶೂಟಿಂಗ್ ಪೂರ್ಣಗೊಂಡಿದೆ' ಎಂದು ಹೇಳಿಕೊಳ್ಳುತ್ತಾರೆ. ಇದೇ ನವೆಂಬರ್ನಲ್ಲಿ "ರಾಮರಸ' ರಿಲೀಸ್ ಮಾಡುವ ಪ್ಲಾ$್ಯನ್ ಚಿತ್ರತಂಡದ್ದು. ಚಿತ್ರಕ್ಕೆ ಕೃಷ್ಣಕುಮಾರ್ ಛಾಯಾಗ್ರಹಣ, ಬಿ.ಜೆ. ಭರತ್ ಸಂಗೀತ, ಅರ್ಜುನ್ ಕಿಟ್ಟು ಸಂಕಲನವಿರಲಿದೆ.