PHOTOS| ಅದಾ ಶರ್ಮಾ ಹಾಟ್​ ಫೋಟೋ ಹಾಕುವುದರ ಹಿಂದಿದೆಯಾ ಈ ಉದ್ದೇಶ!?

Adah
Published on

2015ರಲ್ಲಿ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಮತ್ತು ಪವನ್​ ಒಡೆಯರ್ ಕಾಂಬಿನೇಷನ್​ನಲ್ಲಿ ‘ರಣವಿಕ್ರಮ’ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾ ಮೂಲಕ ಕನ್ನಡಿಗರಿಗೂ ಪರಿಚಯವಾಗಿದ್ದರು ಹಾಟ್​ ಬ್ಯೂಟಿ ಅದಾ ಶರ್ಮಾ. ನೀಳ ಮೈಮಾಟ ಮತ್ತು ಹಾಲಿನ ಬಣ್ಣದ ಚೆಲುವೆಯನ್ನೂ ಅಷ್ಟೇ ಪ್ರೀತಿಯಿಂದಲೇ ಸ್ವಾಗತಿಸಿದ್ದರು ಇಲ್ಲಿನ ಸಿನಿಮಾ ಪ್ರೇಮಿಗಳು. ಆ ಸಿನಿಮಾದ ಬಳಿಕ ಮತ್ತೆ ಕನ್ನಡಕ್ಕೆ ಅವರ ಆಗಮನ ಆಗಲಿಲ್ಲ. ತೆಲುಗು ತಮಿಳು ಮತ್ತು ಹಿಂದಿಯಲ್ಲಿ ತೊಡಗಿಸಿಕೊಂಡರಾದರೂ, ಸದ್ಯಕ್ಕೆ ಅವರ ಕೈ ಖಾಲಿ ಖಾಲಿ!

ಹೌದು, 2019ರಲ್ಲಿ ಎರಡು ಹಿಂದಿ, ಒಂದು ತಮಿಳು ಮತ್ತೊಂದು ತೆಲುಗು. ಒಟ್ಟು ನಾಲ್ಕು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಅದಾ ಶರ್ಮಾ, ಅಲ್ಲಿಂದ ಇಲ್ಲಿಯವರೆಗೂ ಒಂದೇ ಒಂದು ಸಿನಿಮಾ ಆಯ್ಕೆ ಮಾಡಿಲ್ಲ. ಅಥವಾ ಅವರಿಗೆ ಸಿನಿಮಾ ಅವಕಾಶಗಳೇ ಸಿಗುತ್ತಿಲ್ಲವೇ? ಸದ್ಯಕ್ಕೆ ಆ ಬಗ್ಗೆ ಅದಾ ಅವರೇ ಸ್ಪಷ್ಟಪಡಿಸಬೇಕು. ಇದೆಲ್ಲವನ್ನು ಬದಿಗಿಟ್ಟರೆ, ಸೋಷಿಯಲ್​ ಮೀಡಿಯಾದಲ್ಲಿ ಅದಾ ವಿಪರೀತ ಸಕ್ರಿಯರು. ಅದ್ಯಾವ ಮಟ್ಟಿಗೆ ಅಂದರೆ, ನಿತ್ಯ ಐದಾರು ಪೋಸ್ಟ್​ಗಳು ಅವರ ಖಾತೆಯಿಂದ ಅಪ್​ಲೋಡ್​ ಆಗುತ್ತವೆ. ಅದರಲ್ಲಿ ಬಹುತೇಕ ಫೋಟೋಗಳು ಹಾಟ್​ ಹಾಟ್​!

ಹೀಗೆ ಒಂದಾದ ಮೇಲೊಂದರಂತೆ ಅಪ್​ಲೋಡ್​ ಆಗುವ ಫೋಟೋಗಳಿಗೆ ಅಷ್ಟೇ ಮಜಬೂತಾದ ಕಮೆಂಟ್​ಗಳೂ ಸಂದಾಯವಾಗುತ್ತವೆ. ಒಂದಷ್ಟು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೊಂದಿಷ್ಟು ಮಂದಿ ಕಾಲೆಳೆಯುವ ಕೆಲಸ ಮಾಡುತ್ತಾರೆ. ‘ಸಿನಿಮಾ ಅವಕಾಶ ಇಲ್ಲ ಎಂಬ ಕಾರಣಕ್ಕೆ, ಇಷ್ಟೊಂದು ಹಾಟ್ ಆಗುತ್ತಿದ್ದೀರಾ’ ಎಂದು ಇನ್ನು ಕೆಲವರು ಅವರ ಕಾಲೆಳೆಯುತ್ತಿದ್ದಾರೆ. ಆದರೆ, ಅದ್ಯಾವುದನ್ನೂ ಲೆಕ್ಕಿಸದ ಅದಾ, ತಾವಾಯ್ತು, ತಮ್ಮ ಫೋಟೋಗಳಾಯ್ತು ಎನ್ನುತ್ತಿದ್ದಾರೆ. (ಏಜೆನ್ಸೀಸ್​)

ಅದಾ ಶರ್ಮಾ ಹಾಟ್​ ಫೋಟೋಗಳು ಇಲ್ಲಿವೆ ನೋಡಿ...

EZvbNfiUYAAu7HY
EZvbNfjU0AAPMaI
EZvbNfjU4AAy45O
f3090bcd7336a847bce7f52b0c069379
NEW 111
NEW 222
nEW 333
unnamed (1)
unnamed

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net