

ಬೆಂಗಳೂರು: ಡಿಸೆಂಬರ್ 31ರಂದು ಬಿಡುಗಡೆ ಆಗಬೇಕಿದ್ದ ಯೋಗಿ ಅಭಿನಯದ ‘ಒಂಬತ್ತನೇ ದಿಕ್ಕು’ ಚಿತ್ರವನ್ನು ಒಂದು ತಿಂಗಳ ಕಾಲ ಮುಂದೂಡಿ ದ್ದಾರೆ ನಿರ್ದೇಶಕ ದಯಾಳ್ ಪದ್ಮನಾಭನ್. ಹೌದು, ಚಿತ್ರಮಂದಿರಗಳ ಅಭಾವದಿಂದಾಗಿ ‘ಒಂಬತ್ತನೇ ದಿಕ್ಕು’, ಜನವರಿ ಕೊನೆಯ ವಾರಕ್ಕೆ ಮುಂದೂಲ್ಪಟ್ಟಿದೆ.
ಈ ಕುರಿತು ಮಾತನಾಡಿರುವ ದಯಾಳ್, ‘ಡಿ. 31ಕ್ಕೆ ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆದಿತ್ತು. ಆದರೆ, ಅಂದು ನಮಗೆ ಹೆಚ್ಚು ಚಿತ್ರಮಂದಿರಗಳು ಸಿಗಲಿಲ್ಲ. ನಮ್ಮ ಚಿತ್ರವನ್ನು ನಾವೇ ಸಾಯಿಸಬಾರದು. ಜತೆಗೆ, ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯಬೇಕು. ಈ ಎರಡೂ ಕಾರಣಗಳಿಂದ ಚಿತ್ರವನ್ನು ಜ.28ಕ್ಕೆ ಬಿಡುಗಡೆ ಮಾಡುವುದಕ್ಕೆ ತೀರ್ವನಿಸಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ. ‘ಒಂಬತ್ತನೇ ದಿಕ್ಕು’ ಚಿತ್ರದಲ್ಲಿ ಯೋಗಿ, ಅದಿತಿ ಪ್ರಭುದೇವ, ಸಾಯಿಕುಮಾರ್ ಮುಂತಾದವರು ನಟಿಸಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದಾರೆ.