ರಾಕಿ ಮೀಟ್ಸ್ ದೇವ!: ಸಿನಿಮಾ ಸೆಟ್‌ನಲ್ಲಿ ಶಿವರಾಜಕುಮಾರ್ ಭೇಟಿಯಾದ ಯಶ್

yash
Published on

ಬೆಂಗಳೂರು: ‘ಕೆಜಿಎಫ್​’ ಸರಣಿ ಬಳಿಕ ಯಶ್ ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಹು ನಿರೀಕ್ಷಿತ ಸಿನಿಮಾ ಇದಾಗಿದೆ. ಈಗಾಗಲೇ ಮುಹೂರ್ತ ಕಂಡಿದ್ದು, ಬೆಂಗಳೂರಿನ ಹೊರವಲಯದ ಎಚ್‌ಎಂಟಿ ಗ್ರೌಂಡ್‌ನಲ್ಲಿ ಕಳೆದ ಒಂದು ವಾರದಿಂದ ಚಿತ್ರೀಕರಣ ಆರಂಭಿಸಲಾಗಿದೆ. ಶೂಟಿಂಗ್‌ನಲ್ಲಿ ಯಶ್ ಪಾಲ್ಗೊಂಡಿದ್ದು, ಭರದಿಂದ ಚಿತ್ರೀಕರಣ ಸಾಗಿದೆ. ಕಾಕತಾಳೀಯ ಎಂಬಂತೆ, ನಟ ಶಿವರಾಜಕುಮಾರ್ ಅಭಿನಯದ 131ನೇ ಸಿನಿಮಾದ ಚಿತ್ರೀಕರಣ ಕೂಡ ಎಚ್‌ಎಂಟಿ ಗ್ರೌಂಡ್‌ನಲ್ಲಿ ಶೂಟಿಂಗ್ ನಡೆಸಲಾಗುತ್ತಿದೆ. ಬಿಡುವಿನ ನಟ ಯಶ್, ಶಿವರಾಜಕುಮಾರ್ ಚಿತ್ರದ ಸೆಟ್‌ಗೆ ಭೇಟಿ ನೀಡಿದ್ದಾರೆ. ‘ಟಾಕ್ಸಿಕ್’ ಶೂಟಿಂಗ್ ನಡೆಯುತ್ತಿರುವಾಗ ಬ್ರೇಕ್ ತೆಗೆದುಕೊಂಡು ನಟ ಯಶ್, ಶಿವರಾಜಕುಮಾರ್ ಅವರನ್ನು ಸೆಟ್‌ನಲ್ಲಿ ಭೇಟಿ ಮಾಡಿ, ಉಭಯ ಕುಶಲೋಪರಿ ನಡೆಸಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಇಬ್ಬರ ನಟರ ಹೇರ್‌ಸ್ಟೈಲ್ ತುಂಬಾ ಗಮನಸೆಳೆಯುತ್ತಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಯಶ್ ಕಂದುಬಣ್ಣದ ಶರ್ಟ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದು, ಶಿವಣ್ಣ ಬ್ಲ್ಯಾಕ್ ಜಾಕೆಟ್, ಜೀನ್ಸ್ ಪ್ಯಾಂಟ್‌ನಲ್ಲಿ ಮಿಂಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net