

ಬೆಂಗಳೂರು: ಖ್ಯಾತ ನಟ ಯಶ್ ಕೆಜಿಎಫ್ ಸಿನಿಮಾ ಶೂಟಿಂಗ್ ಬಿಟ್ಟು ವೈರಿಗಳ ನಾಶಕ್ಕೆ ಮಾರ್ಕಂಡೇಯ ಹೋಮದಲ್ಲಿ ನಿರತರಾಗಿದ್ದಾರೆ.
ಮಲ್ಲೇಶ್ವರಂನಲ್ಲಿರುವ ದುರ್ಗಾ ರಾಧಾ ಕೃಷ್ಣ ದೇವಾಲಯದಲ್ಲಿ ಯಶ್, ಪತ್ನಿ ರಾಧಿಕಾ ಹಾಗೂ ತಂದೆ ತಾಯಿ ಹೋಮದಲ್ಲಿ ನಿರತರಾಗಿದ್ದಾರೆ.
ನಟ ಯಶ್ ಹೋಮ ಮಾಡಿಸುತ್ತಿರುವ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಭಕ್ತರ ಪ್ರವೇಶ ರದ್ದುಪಡಿಸಲಾಗಿದೆ. ಅಪಕಂಟಕ ಮತ್ತು ವೈರಿ ನಾಶಕ್ಕೆ ಮಾರ್ಕಂಡೇಯ ಹೋಮ ನೆರವೇರಿಸಲಾಗುತ್ತದೆ. ಹೋಮ ಅಂತ್ಯಗೊಂಡ ನಂತರ ಅವರು ಸಿನಿಮಾ ಶೂಟಿಂಗ್ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. (ದಿಗ್ವಿಜಯ ನ್ಯೂಸ್)