ಕಳೆದ 4 ವರ್ಷಗಳಿಂದ ಕಾಡುತ್ತಿದೆ ಅಪರೂಪದ ರೋಗ: ನೋವಿನ ಸಂಗತಿ ಬಿಚ್ಚಿಟ್ಟ ಕಾಲಿವುಡ್ ನಟ ವಿಷ್ಣು ವಿಶಾಲ್​! Actor Vishnu Vishal

ಕಳೆದ 4 ವರ್ಷಗಳಿಂದ ಕಾಡುತ್ತಿದೆ ಅಪರೂಪದ ರೋಗ: ನೋವಿನ ಸಂಗತಿ ಬಿಚ್ಚಿಟ್ಟ ಕಾಲಿವುಡ್ ನಟ ವಿಷ್ಣು ವಿಶಾಲ್​! Actor Vishnu Vishal
ಕಳೆದ 4 ವರ್ಷಗಳಿಂದ ಕಾಡುತ್ತಿದೆ ಅಪರೂಪದ ರೋಗ: ನೋವಿನ ಸಂಗತಿ ಬಿಚ್ಚಿಟ್ಟ ಕಾಲಿವುಡ್ ನಟ ವಿಷ್ಣು ವಿಶಾಲ್​! Actor Vishnu Vishal
Published on

ಪ್ರಮುಖ ಮುಖ್ಯಾಂಶಗಳು

  • ಅಭಿಮಾನಿಗಳ ಕಾಮೆಂಟ್‌ಗೆ ಭಾವುಕರಾಗಿ ಅಸಲಿ ವಿಷಯ ತಿಳಿಸಿದ ವಿಷ್ಣು ವಿಶಾಲ್
  • ಭೀಕರ ಕಾಯಿಲೆಯಿಂದ ಬಳಲುತ್ತಿರುವುದಾಗಿ ಆಘಾತಕಾರಿ ಸಂಗತಿ ಬಿಚ್ಚಿಟ್ಟ ನಟ ವಿಷ್ಣು
  • ಕಾಯಿಲೆಯ ನಡುವೆಯೂ ಶೀಘ್ರ ಚೇತರಿಕೆಯ ವಿಶ್ವಾಸ ವ್ಯಕ್ತಪಡಿಸಿದ ಕಾಲಿವುಡ್ ನಟ
Actor Vishnu Vishal : ಕಾಲಿವುಡ್​ ನಟ ವಿಷ್ಣು ವಿಶಾಲ್​ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಸುಮಾರು 4 ವರ್ಷಗಳಿಂದ 'ಆಟೋಇಮ್ಯೂನ್' ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದು, ಈ ವಿಷಯ ಕೇಳಿ ಅಭಿಮಾನಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ತಮ್ಮ ಬಹುನಿರೀಕ್ಷಿತ 'ಗಟ್ಟಾ ಕುಸ್ತಿ ಪಾರ್ಟ್ 2' ಚಿತ್ರದ ಪ್ರಚಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ವಿಷ್ಣು ವಿಶಾಲ್​ ಅವರು ಈ ಶಾಕಿಂಗ್​ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ವಿಷ್ಣು ವಿಶಾಲ್​ ಅವರು, ನನ್ನ ಇತ್ತೀಚಿನ ಎಲ್ಲಾ ಪೋಸ್ಟ್‌ಗಳಿಗೆ ನೀವು ಮಾಡಿದ ಕಾಮೆಂಟ್‌ಗಳನ್ನು ನಾನು ನೋಡಿದೆ. ಅದು ನನ್ನಲ್ಲಿ ಸಾಕಷ್ಟು ಭಾವುಕತೆ ಮತ್ತು ಉತ್ಸಾಹವನ್ನು ಮೂಡಿಸಿದೆ. ಅದಕ್ಕಾಗಿಯೇ ನಾನು ಈ ವಿಷಯವನ್ನು ನೇರವಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇತ್ತೀಚಿನ ದಿನಗಳಲ್ಲಿ ನನ್ನ ಮುಖ ತುಂಬಾ ಸುಸ್ತಾದಂತೆ ಕಾಣುತ್ತಿರುವುದನ್ನು ನಿಮ್ಮಲ್ಲಿ ಅನೇಕರು ಗಮನಿಸಿದ್ದೀರಿ. ಇದಕ್ಕೆ ಕಾರಣ ನಾನು ಕಳೆದ 3-4 ವರ್ಷಗಳಿಂದ 'ಆಟೋಇಮ್ಯೂನ್' ಕಾಯಿಲೆಯಿಂದ ಬಳಲುತ್ತಿರುವುದು. ಅದಕ್ಕಾಗಿ ನಾನು ವೈದ್ಯರು ಸೂಚಿಸಿದ ಔಷಧಿಗಳನ್ನು ನಿಯತಕಾಲಿಕವಾಗಿ ತೆಗೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಮುಖದಲ್ಲಿ ಕಾಣಿಸುತ್ತಿರುವ ಆಯಾಸವು ನಾನು ತೆಗೆದುಕೊಳ್ಳುತ್ತಿರುವ ಔಷಧಿಗಳ ಅಡ್ಡಪರಿಣಾಮವೇ ಹೊರತು ಬೇರೇನಲ್ಲ, ಆದರೆ ಪ್ರಸ್ತುತ ನನ್ನ ಆರೋಗ್ಯದ ದೃಷ್ಟಿಯಿಂದ ಈ ಚಿಕಿತ್ಸೆ ಅತ್ಯಂತ ಅನಿವಾರ್ಯವಾಗಿದೆ, ಆದಾಗ್ಯೂ ನೀವು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿ-ಬೆಂಬಲ, ನನ್ನ ಮೇಲಿರುವ ಆತ್ಮವಿಶ್ವಾಸ ಹಾಗೂ 'ಗಟ್ಟಾ ಕುಸ್ತಿ 2' ಚಿತ್ರಕ್ಕಾಗಿ ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬರ ಮೇಲಿನ ಜವಾಬ್ದಾರಿಯೇ ನನ್ನನ್ನು ಮುನ್ನಡೆಸುತ್ತಿದೆ, ಅದಕ್ಕಾಗಿಯೇ ಇಂತಹ ಆರೋಗ್ಯದ ಸವಾಲುಗಳ ಮಧ್ಯೆಯೂ ನಾನು ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಶೀಘ್ರದಲ್ಲೇ ನನ್ನ ಆರೋಗ್ಯ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದೆ ಎಂದು ನಟ ವಿಷ್ಣು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿಮ್ಮ ಈ ಕಳಕಳಿ ಮತ್ತು ಕಾಳಜಿಯು ನನ್ನ ಆರೋಗ್ಯದ ಕಡೆಗೆ ಇನ್ನಷ್ಟು ಉತ್ತಮ ಗಮನ ಹರಿಸಲು ನನಗೆ ಪ್ರೇರಣೆ ನೀಡಿದೆ. ನಿಮ್ಮ ಪ್ರತಿಯೊಂದು ಕಾಮೆಂಟ್, ಪ್ರತಿಕ್ರಿಯೆ ಮತ್ತು ಬೆಂಬಲಕ್ಕೆ ನಾನು ಸದಾ ಕೃತಜ್ಞನಾಗಿದ್ದೇನೆ. ಸದ್ಯ ನಾವು 'ಗಟ್ಟಾ ಕುಸ್ತಿ 2' ಚಿತ್ರದ ಪ್ರಚಾರದ ಅಂತಿಮ ಹಂತದಲ್ಲಿದ್ದು, ನಾನು ಅತ್ಯಂತ ಆತ್ಮವಿಶ್ವಾಸ ಹಾಗೂ ಉತ್ಸಾಹದಲ್ಲಿದ್ದೇನೆ. ಇದೇ ಬರುವ ಜುಲೈ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವನ್ನು ನೀವೆಲ್ಲರೂ ವೀಕ್ಷಿಸುವುದನ್ನು ಎದುರುನೋಡುತ್ತಿದ್ದೇನೆ ಎಂದು ನಟ ವಿಷ್ಣು ಹೇಳಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net