ದಸರಾದಲ್ಲಿ ಗಮನ ಸೆಳೆಯಿತು ಡಾ.ರಾಜ್ ಮೊಮ್ಮಗನ ಸರಳತೆ

Vinay Rajkumar
Published on

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ವಿಶ್ವವಿಖ್ಯಾತ ನಾಡಹಬ್ಬ ದಸರಾ ಭಾಗವಾದ ಜಂಬೂಸವಾರಿ ಆರಂಭಗೊಂಡಿದ್ದು, ಈ ವೇಳೆ ಡಾ.ರಾಜಕುಮಾರ್ ಅವರ ಮೊಮ್ಮಗ ಸರಳತೆ ಮೂಲಕ ಗಮನ ಸೆಳೆದಿದ್ದಾರೆ.

ನಟ ರಾಘವೇಂದ್ರ ರಾಜಕುಮಾರ್ ಅವರ ಪುತ್ರ ವಿನಯ್ ರಾಜಕುಮಾರ್​ ಮೈಸೂರಿನಲ್ಲಿ ದಸರಾ ವೀಕ್ಷಿಸಲು ತೆರಳಿದ್ದು, ಜನಜಂಗುಳಿ ಅತಿಯಾಗಿದ್ದರಿಂದ ಜಯಚಾಮರಾಜೇಂದ್ರ ವೃತ್ತದಲ್ಲಿ ಕುಳಿತು ವೀಕ್ಷಿಸುತ್ತಿದ್ದರು. ಈ ವೇಳೆ ಇವರು ಮಾಸ್ಕ್ ಧರಿಸಿದ್ದರಿಂದ ಯಾರ ಗಮನಕ್ಕೆ ಬಂದಿರಲಿಲ್ಲ.

ಜನಸಾಮಾನ್ಯರಂತೆ ವಿನಯ್ ರಾಜಕುಮಾರ್ ದಸರಾ ವೀಕ್ಷಣೆ ಮಾಡುತ್ತಿದ್ದುದು ಒಂದು ಸಂದರ್ಭದಲ್ಲಿ ಗೊತ್ತಾಗುತ್ತಿದ್ದಂತೆ ಅಧಿಕಾರಿಗಳು ಇವರನ್ನು ಅರಮನೆಯ ಗ್ಯಾಲರಿಗೆ ಕರೆದುಕೊಂಡು ಹೋದರು.

ಮೈಸೂರಿನಲ್ಲಿ ಜಂಬೂಸವಾರಿ ವೀಕ್ಷಣೆಗೆ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಜನಸಮೂಹವನ್ನು ನಿಯಂತ್ರಿಸುವುದೇ ಪೊಲೀಸರಿಗೆ ಒಂದು ಹರಸಾಹಸವಾಗಿದೆ. ಈಗಾಗಲೇ ನೂಕುನುಗ್ಗಲು ಉಂಟಾಗಿದ್ದು, ನಿಯಂತ್ರಣಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net