

ಬೆಂಗಳೂರು: ‘ಫ್ಯಾಂಟಮ್ ಚಿತ್ರಕ್ಕಾಗಿ ಮೂರು ತಿಂಗಳುಗಳ ಕಾಲ ಸುದೀಪ್ ಹೈದರಾಬಾದ್ನಲ್ಲಿ ಬೀಡುಬಿಟ್ಟಿದ್ದರು. ಅಷ್ಟೊಂದು ದಿನಗಳ ಕಾಲ ಅಲ್ಲಿದ್ದುದರಿಂದ, ಸುದೀಪ್ಗೆ ಹೈದರಾಬಾದ್ನಲ್ಲೇ ಏನಾದರೂ ಮನೆ ಖರೀದಿಸಿ ನೆಲೆಗೊಳ್ಳುವ ಯೋಚನೆ ಇದೆಯಾ ಎಂದು ಗಾಂಧಿನಗರದಲ್ಲಿ ಕೆಲವರು ತಮಾಷೆಯಾಗಿ ಕೇಳಿದ್ದೂ ಇತ್ತು. ಈಗ ನೋಡಿದರೆ ಅದು ನಿಜವಾಗಿದೆ.
ಹೈದರಾಬಾದ್ನ ಗಾಚಿಬೌಲಿ ಪ್ರದೇಶದಲ್ಲಿ ಸುದೀಪ್ ಐದು ಕೋಟಿ ವೆಚ್ಚದ ಫ್ಲಾಟ್ ಖರೀದಿಸಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಅಷ್ಟೇ ಅಲ್ಲ, ‘ಫ್ಯಾಂಟಮ್ ಚಿತ್ರದ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಸುದೀಪ್ ಅದೇ ಮನೆಯಲ್ಲಿ ವಾಸ್ತವ್ಯ ಹೂಡಿದ್ದರಂತೆ. ಮೂಲಗಳ ಪ್ರಕಾರ, ‘ಈಗ’ ಚಿತ್ರೀಕರಣದ ಸಂದರ್ಭದಲ್ಲೇ ಸುದೀಪ್ ಫ್ಲಾಟ್ ಖರೀದಿಸುವುದಕ್ಕೆ ಮುಂದಾಗಿ ಮುಂಗಡ ಕೊಟ್ಟಿದ್ದರಂತೆ. ಆಗ ಶುರುವಾದ ಕಟ್ಟಡ ನಿರ್ವಣ, ಎರಡು ವರ್ಷಗಳ ಹಿಂದೆ ಮುಗಿದಿದ್ದು, ಹೈದರಾಬಾದ್ಗೆ ಹೋದರೆ ಸುದೀಪ್ ಆ ಮನೆಯಲ್ಲಿ ವಾಸ್ತವ್ಯ ಹೂಡುತ್ತಾರಂತೆ.
ಡಿ.7ರಿಂದ ಮತ್ತೆ ಫ್ಯಾಂಟಮ್ ಅಂದಹಾಗೆ, ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿಸಿರುವ ‘ಫ್ಯಾಂಟಮ್ ಚಿತ್ರತಂಡವು ಡಿ.7ರಿಂದ ಕೇರಳದಲ್ಲಿ ಮೂರನೇ ಹಂತದ ಚಿತ್ರೀಕರಣ ಮಾಡಲಿದೆ. 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಜನವರಿಯಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ.