ಫ್ಯಾನ್ಸ್ ಜತೆ ಟೀ ಕುಡಿದ ಹ್ಯಾಟ್ರಿಕ್ ಹೀರೋ

Shivanna
Published on

ಮೈಸೂರು: ಕುಟುಂಬ ಸದಸ್ಯರೊಂದಿಗೆ ಸಾಂಸ್ಕೃತಿಕ ನಗರಿ ಮೈಸೂರು ಪ್ರವಾಸದಲ್ಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಭಾನುವಾರ ಬೆಳಗ್ಗೆ ಅಭಿಮಾನಿಗಳೊಂದಿಗೆ ಟೀ ಕುಡಿದು ಸರಳತೆ ಮೆರೆದಿದ್ದಾರೆ.

ನಗರದ ಮಾತೃಮಂಡಲಿ ವೃತ್ತದ ಬಳಿ ಇರುವ ಡಾ.ರಾಜ್ ಟೀ ಸ್ಟಾಲ್​ಗೆ ಆಗಮಿಸಿದ ಶಿವಣ್ಣ, ಸಾಮಾನ್ಯರಂತೆ ರಸ್ತೆ ಬದಿಯಲ್ಲೇ ಅಭಿಮಾನಿಗಳೊಂದಿಗೆ ಟೀ ಸವಿದಿದ್ದಾರೆ.

ಶಿವಣ್ಣನ ಭೇಟಿಯಿಂದಾಗಿ ಅಭಿಮಾನಿಗಳು ಖುಷಿಪಟ್ಟರು. ರಸ್ತೆ ಬದಿಯ ಟೀ ಅಂಗಡಿಯಲ್ಲಿ ಶಿವಣ್ಣ ಅವರನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡರು. ಅವರ ಜತೆ ಟೀ ಕುಡಿದು, ಫೋಟೋ ತೆಗಿಸಿಕೊಂಡು ಸಂಭ್ರಮಿಸಿದರು. ಇತ್ತೀಚೆಗಷ್ಟೇ ಪುನೀತ್ ರಾಜ್​ಕುಮಾರ್ ಸಹ ರಸ್ತೆ ಬದಿಯ ಗೂಡಂಗಡಿಯಲ್ಲಿ ಊಟ ಮಾಡಿ ಸರಳತೆ ಮೆರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net