‘ಪಟ್ಲಿ’ ರವಿಕಿರಣ್ : ಉತ್ತರ ಕರ್ನಾಟಕದ ಜವಾರಿ ಕಥೆಯಲ್ಲಿ ‘ತಾರಕಾಸುರ’ ನಟ

ravi kira
Published on

ಬೆಂಗಳೂರು: ಕನ್ನಡದ ‘ತಾರಕಾಸುರ’, ‘ಕೈಲಾಸ ಕಾಸಿದ್ರೆ’ ಚಿತ್ರಗಳಲ್ಲಿ ನಟಿಸಿದ್ದ ರವಿಕಿರಣ್ ಸದ್ಯ ಎರಡು ಸಿನಿಮಾಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ‘ಗದಾಧಾರಿ ಹನುಮಾನ್’, ‘ಅಪ್ಪು ಅಭಿಮಾನಿ’ ಚಿತ್ರಗಳು ಕೊನೆಯ ಹಂತದಲ್ಲಿವೆ. ಅದರ ನಡುವೆ ರವಿಕಿರಣ್ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ‘ಪಟ್ಲಿ’ ಎಂಬ ಹೊಸ ಸಿನಿಮಾ ಘೋಷಿಸಿದ್ದಾರೆ. ಇದು ಉತ್ತರ ಕರ್ನಾಟಕ ಸೊಗಡಿನ ಕಥೆಯಾಗಿದ್ದು, ಆ ಭಾಗದಲ್ಲಿ ನಡೆಯುವ ಕುರಿ ಕಾಳಗದ ಸುತ್ತ ಸುತ್ತುತ್ತದೆ. ರಾಕಿ ಸೋಮ್ಲಿ ಈ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ. ರವಿಕಿರಣ್, ‘ಕಳೆದ ಒಂದು ವರ್ಷದಿಂದ ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ. ಸದ್ಯ ನನ್ನ ಎರಡು ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿವೆ. ಹಾಗಾಗಿ, ಜನವರಿಯಿಂದ ‘ಪಟ್ಲಿ’ ಶೂಟಿಂಗ್ ಆರಂಭಿಸಲಿದ್ದೇವೆ. ಪ್ರಾಣಿ ಮತ್ತು ಮನುಷ್ಯನ ನಡುವಿನ ಬಾಂಧವ್ಯ ಸಾರುವ ಚಿತ್ರವಿದು. ನನ್ನ ಪಾತ್ರದ ಬಹುತೇಕ ಭಾಗ ಕುರಿಗಳ ಜತೆ ಸಾಗುತ್ತದೆ. ಹಾಗಾಗಿ, ಕುರಿಮರಿಯನ್ನು ಸಾಕಿ, ಅದರ ಜತೆ ಬಾಂಧವ್ಯ ಬೆಳೆಸಿಕೊಳ್ಳಬೇಕಿದೆ. ಅವುಗಳ ಜತೆ ಬದುಕುವುದೇ ನನಗೆ ದೊಡ್ಡ ಸವಾಲು. ಹಾಗೇ ಪಾತ್ರಕ್ಕಾಗಿ ಉತ್ತರ ಕರ್ನಾಟಕ ಭಾಷೆಯನ್ನು ಕಲಿಯಬೇಕಿದೆ. ಅದಕ್ಕೆ ತಯಾರಿ ನಡೆಸುತ್ತಿದ್ದೇನೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ತಮಿಳಿಗೆ ಡಬ್ ಆಗಲಿದೆ’ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net