ಫಿಲಂ ಮೇಕರ್ಸ್​ ಮೊದಲು ಈ ಐಡಿಯಾ ಬಳಸಿಕೊಳ್ಳಲಿ: ನಟ ರಾಜ್​ ಬಿ.ಶೆಟ್ಟಿ

raj b shetty
Published on

ಬೆಂಗಳೂರು: ವಿಜಯವಾಣಿ (Vijayavani) ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸ್ಯಾಂಡಲ್​​ವುಡ್​ ನಟ, ನಿರ್ದೇಶಕ ರಾಜ್ ಬಿ.ಶೆಟ್ಟಿ (Raj B Shetty), ನಮ್ಮ ಚಿತ್ರರಂಗದಲ್ಲಿ ಸಿನಿಮಾ ತಯಾರಕರು ಮೊದಲು ಈ ಐಡಿಯಾ ಉಪಯೋಗಿಸಿಕೊಳ್ಳಬೇಕು ಎಂದು ಸಲಹೆಯೊಂದನ್ನು ನೀಡಿದ್ದಾರೆ.

"ನಮ್ಮಲ್ಲಿ ಏಕೆ ಚಿತ್ರಮಂದಿರಗಳು ಕ್ಷಿಣಿಸುತ್ತಿದೆ ಎಂದರೆ ನಾವು ನಿರಂತರವಾಗಿ ಒಳ್ಳೊಳ್ಳೆ ಚಿತ್ರಗಳನ್ನು ನೀಡದೆ ಇರುವುದು ಅದಕ್ಕೆ ಕಾರಣ ಎಂದು ನನಗೆ ಅನಿಸುತ್ತದೆ. ಉತ್ತಮ ಸಿನಿಮಾಗಳಿಗೆ ಒಂದು ತಂಡವಾಗಿ ಕೆಲಸ ಮಾಡಿ, ಅದನ್ನು ಜನರ ಮುಂದೆ ಇಡುವುದು ನಮ್ಮ ಜವಾಬ್ದಾರಿ. ನಾನು ಈ ಹಿಂದೆಯೇ ಹೇಳಿದ್ದೆ, ನಾವು ಚಿತ್ರವನ್ನು ಮಾಡುವುದು ಎಷ್ಟು ಮುಖ್ಯವೋ, ಮಾರುವುದು ಕೂಡ ಅಷ್ಟೇ ಮುಖ್ಯ! ಎಲ್ಲಾ ಚಿತ್ರಗಳಿಗೂ ಜನರು ಥಿಯೇಟರ್​​ಗೆ ಬಂದು ಚಪ್ಪಾಳೆ ಹೊಡೆಯಬೇಕು ಎಂದು ಅಂದುಕೊಳ್ಳುವುದು ತಪ್ಪಾಗುತ್ತದೆ" ಎಂದು ಹೇಳಿದರು.

"ಕೆಲವೊಂದು ಸಣ್ಣ ಚಿತ್ರಗಳು ಇರುತ್ತದೆ ಅದನ್ನು ನಾವು ಓಟಿಟಿಯಲ್ಲೇ ನೋಡಿ ಅನುಭವಿಸಬೇಕು. ಇನ್ನು ಕೆಲವು ಚಿತ್ರಗಳನ್ನು ಥಿಯೇಟರ್​​ಗೆ ಹೋಗಿ ವೀಕ್ಷಿಸಬೇಕಾಗುತ್ತದೆ. ಸಿನಿಮಾಗಳನ್ನು ನೋಡುವ ರೀತಿ ಬದಲಾಗಿದೆ ಹೊರತು ಜನರು ಬದಲಾಗಿದ್ದಾರೆ ಎಂದು ನಾನು ಭಾವಿಸುವುದಿಲ್ಲ" ಎಂದು ಹೇಳಿದರು. ಮತ್ತಷ್ಟು ಸಂಗತಿಗಳನ್ನು ತಿಳಿಯಲು ಈ ಕೆಳಗಿನ ವೀಡಿಯೋ ಲಿಂಕ್​ ಕ್ಲಿಕ್ ಮಾಡಿ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net