

ಬೆಂಗಳೂರು: ರಾಗಿಣಿ ದ್ವಿವೇದಿ ಒಂದಲ್ಲ, ಎರಡಲ್ಲ, ಮೂರ್ನಾಲ್ಕು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ನಾಯಕಿಯಾಗಿ, ಅತಿಥಿ ಪಾತ್ರದಲ್ಲಿ, ವಿಶೇಷ ಹಾಡೊಂದರಲ್ಲಿ ... ಹೀಗೆ ಒಂದೊಂದು ಚಿತ್ರದಲ್ಲಿ ಒಂದೊಂದು ಜವಾಬ್ದಾರಿ ಅವರಿಗೆ. ಅದೆಲ್ಲದರ ಮಧ್ಯೆ, ರಾಗಿಣಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅದರ ಮುಹೂರ್ತ ಸಹ ನಡೆದಿದ್ದು, ಚಿತ್ರಕ್ಕೆ ‘ಸಾರಿ - ಕರ್ಮ ರಿಟರ್ನ್ಸ್’ ಎಂದು ಶೀರ್ಷಿಕೆ ಇಡಲಾಗಿದೆ. ಆಕ್ಷನ್, ಕ್ರೖೆಂ, ಥ್ರಿಲ್ಲರ್ ಕಥಾಹಂದರ ಇರುವ ಈ ಚಿತ್ರವನ್ನು ಬ್ರಹ್ಮ ಎಂಬುವವರು ನಿರ್ದೇಶಿಸುತ್ತಿದ್ದಾರೆ.
ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ರಾಗಿಣಿ, ‘ಶೀರ್ಷಿಕೆಯಲ್ಲಿಯೇ ಸಿನಿಮಾದ ಕಥೆ ಹೇಳಿದ್ದೇವೆ. ಈವರೆಗೂ ನಾನು ನಟಿಸಿದ ಚಿತ್ರಗಳಿಗಿಂತ ತುಂಬ ಭಿನ್ನವಾದ ಚಿತ್ರವಿದು. ಇಲ್ಲಿ ನನಗೆ ಎರಡು ಶೇಡ್ಗಳಿವೆ. ಕನ್ನಡ, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಚಿತ್ರ ನಿರ್ವಣವಾಗಲಿದೆ. ಸಿನಿಮೋತ್ಸವಗಳಿಗೂ ಕಳುಹಿಸಲಿದ್ದೇವೆ. ನನ್ನಿಂದ ಬೇರೆ ಥರಹದ ಆಕ್ಷನ್ ಇಲ್ಲಿ ನಿರೀಕ್ಷಿಸಬಹುದು’ ಎಂಬುದು ರಾಗಿಣಿ ಮಾತು. ‘ಸಾರಿ’ ಜತೆಜತೆಗೇ ‘ಕರ್ವ 3’ ಮತ್ತು ‘ಜಾನಿ ವಾಕರ್’ ಚಿತ್ರಗಳ ಚಿತ್ರೀಕರಣ ಸಹ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ, ಮುಂದಿನ ವಾರ ‘ರಾಣಾ’ ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಅವರು ಭಾಗವಹಿಸಲಿದ್ದಾರೆ.
‘ಸಾರಿ - ಕರ್ಮ ರಿಟರ್ನ್ಸ್’ ಚಿತ್ರವು ಕಿಸ್ ಇಂಟರ್ನ್ಯಾಷನಲ್ ಬ್ಯಾನರ್ನಲ್ಲಿ ನಿರ್ವಣವಾಗುತ್ತಿದೆ. ಚಿತ್ರಕ್ಕೆ ರಾಜು ಎಮ್ಮಿಗನೂರು ಸಂಗೀತ, ರಾಜೀವ್ ಗಣೇಸನ್ ಛಾಯಾಗ್ರಹಣ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ರಾಗಿಣಿ ಜತೆಗೆ ಅಫ್ಜಲ್, ವಿ.ಜೆ ಮನೋಜ್, ರಣವೀರ್, ಯುಕ್ತ ಪೆರ್ವಿ, ಪೂಜಾ ಪಾಟೀಲ್ ನಟಿಸುತ್ತಿದ್ದಾರೆ.