VIDEO| ಲಾಕ್​ಡೌನ್​ ಏಕತಾನತೆ ಮರೆಯಲು ನೃತ್ಯದ ಮೊರೆಹೋದ ಪ್ರಜ್ವಲ್​ ದೇವರಾಜ್​ ದಂಪತಿ

prajwal devraj april
Published on

ಬೆಂಗಳೂರು: ಲಾಕ್​ಡೌನ್​ ಹಿನ್ನೆಲೆಯಲ್ಲಿ ನಟ ಪ್ರಜ್ವಲ್​ ದೇವರಾಜ್​ ಹಾಗೂ ಅವರ ಪತ್ನಿ ರಾಗಿಣಿ ಚಂದ್ರನ್​ ಏಕತಾನತೆ ಮರೆಯಲು ಹಾಡು ಹಾಗೂ ನೃತ್ಯದ ಮೊರೆ ಹೋಗಿದ್ದಾರೆ.

ಅಬುಸಾದಮೆಂಟ್​ ಎನ್ನುವ ಬ್ರೆಜಿಲಿಯನ್​ ಹಾಡಿಗೆ ಇಬ್ಬರು ಹೆಜ್ಜೆ ಹಾಕಿದ್ದಾರೆ. 1.5 ನಿಮಿಷದ ನರ್ತಿಸುವ ವಿಡಿಯೋ ಅನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೃತ್ಯದ ವಿಡಿಯೋ ಅಪ್​ಲೋಡ್​ ಆಗುತ್ತಲೇ 11, 174 ಮಂದಿ ವೀಕ್ಷಣೆ ಮಾಡಿದ್ದಾರೆ. ಹಲವು ಮಂದಿ ಪ್ರತಿಕ್ರಿಯೆ ಕೂಡ ವ್ಯಕ್ತಪಡಿಸಿದ್ದಾರೆ.

ಲಾಕ್​ಡೌನ್​ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ನಟರು ಮನೆಯಲ್ಲೇ ಕಾಲ ಕಳೆಯಲು ಹಲವು ಚಟುವಟಿಕೆಗಳನ್ನು ರೂಢಿಸಿಕೊಂಡಿದ್ದಾರೆ.

ಲಾಕ್​ಡೌನ್​ ಕಾಲ ಕಳೆಯಲು ಪತ್ನಿ ಜತೆ ಈ ನೃತ್ಯ ಎಂದು ಅವರು ಶೀರ್ಷಿಕೆ ಬರೆದು ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net