ನಿಖಿಲ್ ಕುಮಾರ್​ ನಟನೆಯ ನೂತನ ಚಿತ್ರಕ್ಕೆ ಕಾರಂಜಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಹೂರ್ತ

nikil kumar jan 30 2020
Published on

ಬೆಂಗಳೂರು: ನಟ ನಿಖಿಲ್​ ಕುಮಾರ್​ ಅವರ ನೂತನ ಚಿತ್ರಕ್ಕೆ ಇಂದು ನಗರದ ಕಾರಂಜಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಹೂರ್ತ ನೆರವೇರಿತು.

ನಿಖಿಲ್​ ಕುಮಾರಸ್ವಾಮಿ ಅವರ 3ನೇ ಚಿತ್ರ ಇದಾಗಿದೆ. ಸೀತಾರಾಮ ಕಲ್ಯಾಣದ ನಂತರ ನಿಖಿಲ್​ ನಟಿಸುತ್ತಿರುವ ಚಿತ್ರ.

ನಟ ದತ್ತಣ್ಣ, ಶಿವು ಕೆಆರ್​ಪೇಟೆ, ಲಹರಿ ವೇಲು ಸೇರಿತದಂತೆ ಹಿರಿಯ ನಟ ಹಾಗೂ ನಟಿಯರು ಮುಹೂರ್ತದಲ್ಲಿ ಪಾಲ್ಗೊಂಡಿದ್ದರು.

ನಟ ನಿಖಿಲ್​ ಕುಮಾರಸ್ವಾಮಿ ಅವರ ವಿವಾಹ ನಿಗದಿ ಹಾಗೂ ಹೊಸ ಸಿನಿಮಾ ಸೆಟ್ಟೇರುತ್ತಿರುವುದು ಅಭಿಮಾನಿಗಳಿಗೆ ತುಂಬಾ ಖುಷಿ ತಂದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net