

ಬೆಂಗಳೂರು: ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಆಸೆ ಹೊತ್ತು ಬರುವವರಿಗೆ ನವರಸ ನಾಯಕ ಜಗ್ಗೇಶ್ ಅವರು ಎಚ್ಚರಿಕೆ ಸಂದೇಶವೊಂದನ್ನು ನೀಡಿದ್ದಾರೆ.
ಜಗ್ಗೇಶ್ ಸರ್, ನಿರ್ದೇಶಕನಾಗಬೇಕೆಂಬುದು ನನ್ನ ಕನಸು. ನಾನೀಗ ದ್ವಿತೀಯ ವರ್ಷದ ಡಿಪ್ಲೋಮ ಮಾಡುತ್ತಿದ್ದೇನೆ. ಮುಗಿದ ಬಳಿಕ ಇಂಜಿನಿಯರ್ ಸೇರಿಕೊಳ್ಳಲಾ? ಅಥವಾ ಸಿನಿಮಾಗೆ ಬರಲಾ? ಎಂದು ಅಭಿಮಾನಿಯೊಬ್ಬ ಟ್ವೀಟ್ ಮೂಲಕ ಜಗ್ಗೇಶ್ ಅವರನ್ನು ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್, ದಯಮಾಡಿ ಓದಿ ದಡ ಸೇರಿ. ಇಂದಿನ ಸಿನಿಮಾ ನಂಬಿ ತಂದೆ-ತಾಯಿ ಕನಸು, ನಿಮ್ಮ ಜೀವನ ಹಾಳು ಮಾಡಿಕೊಳ್ಳದಿರಿ. ನೀವೆಲ್ಲ ಅಂದುಕೊಂಡಷ್ಟು ಸುಲಭವಿಲ್ಲ ಇಂದಿನ ಸಿನಿಮಾ. ಬೇಕಾದರೆ ಸಂತೋಷಕ್ಕೆ ಹವ್ಯಾಸವನ್ನಾಗಿ ಬಳಸಿ ಆದರೆ, ವೃತ್ತಿಯಾಗಿ ಅಲ್ಲ. ಕೆಲವೇ ಕಲವರನ್ನು ಬಿಟ್ಟು ಶೇ. 98% ಸಿನಿಮಾ ಮಂದಿ ಸಂಕಷ್ಟದಲ್ಲಿದ್ದಾರೆಂದು ಅಭಿಮಾನಿಗೆ ಜಗ್ಗೇಶ್ ಎಚ್ಚರಿಕೆ ನೀಡಿದ್ದಾರೆ.