

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಗುಬ್ಬಿ ಶಾಸಕ ಶ್ರೀನಿವಾಸ್ ಪುತ್ರ ದುಷ್ಯಂತ್ "ಗತವೈಭವ' ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡುತ್ತಿರುವುದು ಗೊತ್ತಿದೆ. ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ಈ ರೊಮ್ಯಾಂಟಿಕ್ ಪೀರಿಯಡ್ ಫ್ಯಾಂಟಸಿ ಚಿತ್ರದಲ್ಲಿ ದುಷ್ಯಂತ್ಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಈಗಾಗಲೇ ಟೀಸರ್, ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿರುವ "ಗತವೈಭವ' ಇದೇ ತಿಂಗಳ 14ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ರಾಜಕಾರಣದ ಹಿನ್ನೆಲೆ ಇರುವ ಕೆಲ ನಟರು ಈಗಾಗಲೇ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಆದರೆ, ದುಷ್ಯಂತ ಅವರೆಲ್ಲರಿಗಿಂತ ಭಿನ್ನ.
"ನಟರಲ್ಲಿ ಮೂರು ವರ್ಗಗಳಿರುತ್ತವೆ. ಸ್ಟಾರ್ ರೀತಿ ಬಂದು ನಟಿಸುವವರು ಒಬ್ಬರು, ತೆರೆಯ ಮೇಲೆ ಕಾಣಿಸಿಕೊಂಡರೆ ಸಾಕು ಅಂತ ಆಸೆಪಡುವ ಜೀರೋಯಿಂದ ಬರುವ, ಏನೇ ಸಿಕ್ಕರೂ ಪ್ಲಸ್ ಅಂತ ಅಂದುಕೊಳ್ಳುವ ಇನ್ನೊಬ್ಬರು. ಎಲ್ಲ ಇದ್ದರೂ ಯಾವ ಸಂದರ್ಭದಲ್ಲಿ ಏನು ಬೇಕೋ, ಅದು ಬೇಕು ಅಂದಾಗ ಸಿಗದ, ಆಂತರಿಕ ಹೋರಾಟದಲ್ಲಿರುವ, ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳಲು ನಿರಂತರ ಪ್ರಯತ್ನದಲ್ಲಿರುವ ಮತ್ತೊಬ್ಬರು. ನಾನು ಈ ಮೂರನೇ ವರ್ಗಕ್ಕೆ ಸೇರಿದವನು. ಅದು ಉಳಿದ ಎರಡಕ್ಕಿಂತ ತುಂಬ ಕಷ್ಟ ಅನ್ನುವುದು ನನ್ನ ಭಾವನೆ' ಎನ್ನುತ್ತಾರೆ.
"ಬಾಲ್ಯದಲ್ಲಿ ನನಗೆ ಸಿನಿಮಾ ಒಂದು ಕುತೂಹಲಕಾರಿ ಮ್ಯಾಜಿಕಲ್ ಪ್ರಪಂಚದಂತೆ ಕಾಣುತ್ತಿತ್ತು. ಅದರ ಭಾಗವಾಗುವ ಆಸಕ್ತಿ, ಆಸೆ ಇತ್ತು. ನಟನಾಗುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಆದರೆ, ಗಾಯಕನಾಗಿ ಅಥವಾ ತಂತ್ರಜ್ಞನಾಗಿ ತೊಡಗಿಸುವ ಆಸಕ್ತಿ ಇತ್ತು. ಆದರೆ, ಎಲೆಮರೆ ಕಾಯಿಯಂತಿರುವ ಕುಟುಂಬ ನಮ್ಮದು. ಅದಕ್ಕೆ ವಿರುದ್ಧವಾದ ಕ್ಷೇತ್ರ ಚಿತ್ರರಂಗ. ನಮ್ಮ ಕುಟುಂಬಕ್ಕೆ ಚಿತ್ರರಂಗ ಒಗ್ಗುವುದಿಲ್ಲ ಅಂತ ನನಗೆ ಗೊತ್ತಿತ್ತು. ಆದರೂ ವೃತ್ತಿಪರ ಸಂಗೀತ ಕಲಿತಿದ್ದೆ. ಶಾಲಾದಿನಗಳಲ್ಲಿ ನಾಟಕಗಳನ್ನು ಮಾಡುತ್ತಿದ್ದೆ. ಕ್ರಮೇಣ ನಟನೆಯ ಬಗ್ಗೆ ಆಸಕ್ತಿ ಹೆಚ್ಚಾಯಿತು. ಕನ್ನಡಿ ಮುಂದೆ ಒಬ್ಬನೇ ಪ್ರ್ಯಾಕ್ಟೀಸ್ ಮಾಡತೊಡಗಿದೆ. ಬಳಿಕ ಟೆಂಟ್ ಸಿನಿಮಾದಲ್ಲಿ ನಟನೆ ಕೋರ್ಸ್, ಬೀದಿ ನಾಟಕ, ಕಿರುಚಿತ್ರ, ಮ್ಯೂಸಿಕ್ ವಿಡಿಯೋಗಳಲ್ಲಿ ನಟಿಸಿದೆ. ನಟನಾಗುವ ಆತ್ಮವಿಶ್ವಾಸವೂ ಹೆಚ್ಚಿತು. 89 ಕೆಜಿ ತೂಕ ಇದ್ದವನು 20 ಕೆಜಿ ತೂಕ ಇಳಿಸಿದೆ. ಡಾನ್ಸ್, ಮಾರ್ಷಲ್ ಆರ್ಟ್ಸ್, ಜಿಮ್ನಾಸ್ಟಿಕ್ ಕಲಿತೆ' ಎಂದು ಮಾಹಿತಿ ನೀಡುತ್ತಾರೆ ದುಷ್ಯಂತ್.
ಒಂದು ಕಥೆ ಹೇಳುವುದೇ ಕಷ್ಟ. ಇನ್ನು "ಗತವೈಭವ'ದಲ್ಲಿ ಸಿಂಪಲ್ ಸುನಿ ನಾಲ್ಕು ಜನ್ಮಗಳ ಕಥೆ ಹೇಳಿದ್ದಾರೆ. ಹೀಗಾಗಿಯೇ ಚಿತ್ರಕ್ಕೆ ನಾಲ್ಕು ಪಟ್ಟು ಶ್ರಮವೂ ಹೆಚ್ಚು. ಹಾಗೇ ಪ್ರೇಕ್ಷಕರಿಗೆ ಒಂದೇ ಟಿಕೆಟ್ ದರದಲ್ಲಿ ನಾಲ್ಕು ಸಿನಿಮಾಗಳನ್ನು ನೋಡುವ ಅನುಭವವೂ ದೊರೆಯಲಿದೆ. ದುಷ್ಯಂತ್, "ಸಮುದ್ರಮಂಥನದ ಸಮಯದಲ್ಲಿ ರಾಕ್ಷಸನಾಗಿ, 1498ರ ವಾಸ್ಕೋಡಗಾಮನ ಕಾಲ, ಸ್ವಾತಂತ್ರ$್ಯ ಪೂರ್ವ ಕರಾವಳಿ ಭಾಗದ ಕಂಬಳ ಓಡಿಸುವ ಹಾಗೂ ಈಗಿನ ಕಾಲಟ್ಟದ ಹುಡುಗನಾಗಿ ನಾಲ್ಕು ವಿಭಿನ್ನ ಲುಕ್, ಪಾತ್ರಗಳಲ್ಲಿ ನಟಿಸಿದ್ದೇನೆ. ಹೀಗೆ ನಾಲ್ಕು ಜನ್ಮ, ನಾಲ್ಕು ಕಥೆ, ನಾಲ್ಕು ರೀತಿಯ ಪಾತ್ರವಿರುವ ಕಾರಣ ಸಿದ್ಧತೆಯೂ ನಾಲ್ಕು ಪಟ್ಟು ಬೇಕಾಯಿತು. ಪ್ರತಿ ಶೆಡ್ಯೂಲ್ಗೂ ಮುನ್ನ ಮೂರು ತಿಂಗಳ ತಯಾರಿ ಬೇಕಿತ್ತು' ಎನ್ನುತ್ತಾರೆ.
"ಗತವೈಭವ'ದಲ್ಲಿ ದೃಶ್ಯವೈಭವವಿದೆ. ಅದಕ್ಕೆ ಪೂರಕ ಎಂಬಂತೆ ಒಂದು ತಾಸಿಗೂ ಹೆಚ್ಚು ವಿಎ್ಎಕ್ಸ್ ಚಿತ್ರದಲ್ಲಿದೆ. ಎಲ್ಲಕ್ಕೂ ಹೆಚ್ಚಾಗಿ ವಿಶ್ವಾದ್ಯಂತ ಹುಡುಕಿ ಒಂದು ಹಡಗಿನಲ್ಲಿ ಚಿತ್ರೀಕರನ ನಡೆಸಲಾಗಿದೆ. "ಇಟಲಿ, ್ರಾನ್ಸ್, ಜರ್ಮನಿ, ಮೊರಾಕೊ, ುಕೆಟ್, ಆಸ್ಟ್ರೆಲಿಯಾ ಸೇರಿ ವಿಶ್ವದೆಲ್ಲೆಡೆ 12 ಹಡಗುಗಳನ್ನು ಅಂತಿಮಗೊಳಿಸಿ. ನಮ್ಮ ತಂಡದವರನ್ನು ಅಲ್ಲಿಗೆಲ್ಲ ಕಳುಹಿಸಿ ಮೂರನ್ನು ಓಕೆ ಮಾಡಿದೆವು. ಅದರಲ್ಲಿ ಕೊನೆಗೆ ಒಂದನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡೆವು. ಆ ಹಳೆಯ ಹಡಗಿನಲ್ಲಿ ಸಮುದ್ರದ ಮಧ್ಯಕ್ಕೆ ತೆರಳಿ ಚಿತ್ರೀಕರಣ ನಡೆಸಿದ್ದು ತುಂಬ ಚಾಲೆಂಜಿಂಗ್ ಆಗಿತ್ತು' ಎಂದು ಅನುಭವ ಹಂಚಿಕೊಳ್ಳುತ್ತಾರೆ.