

ಬೆಂಗಳೂರು: "ಪೊಗರು' ಬಳಿಕ "ದುಬಾರಿ' ಸಿನಿಮಾದಲ್ಲಿಯೂ ನಿರ್ದೇಶಕ ನಂದಕಿಶೋರ್ ಮತ್ತು ನಟ ಧ್ರುವ ಸರ್ಜಾ ಮತ್ತೆ ಒಂದಾಗಿರುವುದು ಈ ಹಿಂದೆಯೇ ಸುದ್ದಿಯಾಗಿತ್ತು. ಅಧಿಕೃತವಾಗಿ ಚಿತ್ರದ ಮುಹೂರ್ತವೂ ನೆರವೇರಿತ್ತು. ಇದೀಗ ಈ ಚಿತ್ರವೇ ಅರ್ನಿದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ!
"ದುಬಾರಿ' ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಅದ್ದೂರಿ ವೆಚ್ಚದ ಈ ಚಿತ್ರದ ಶೇ. 65ರಷ್ಟು ಭಾಗದ ಶೂಟಿಂಗ್ ವಿದೇಶಗಳಲ್ಲಿ ನಡೆಯಬೇಕಿತ್ತು. ಸದ್ಯ ಕೋವಿಡ್ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಶೂಟಿಂಗ್ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಚಿತ್ರವನ್ನೇ ಮುಂದೂಡಿದ್ದಾರೆ ನಿರ್ಮಾಪಕರು. ಹಾಗಾಗಿ ಈ ನಡುವೆ ಮತ್ತೊಂದು ಸಿನಿಮಾ ಸೆಟ್ಟೇರಲಿದ್ದು, ಹೊಸ ನಿರ್ದೇಶಕರ ಜತೆ ಕೈ ಜೋಡಿಸಿ ದ್ದಾರೆ. ಮೊದಲಿನಂತೆ ನಾಯಕನಾಗಿ ಧ್ರುವ ಮುಂದುವರಿಯಲಿದ್ದು, ಶ್ರೀಲಿಲಾ ಅವರೇ ಇಲ್ಲಿಯೂ ನಾಯಕಿ ಎಂದು ಹೇಳಲಾಗುತ್ತಿದೆ. ತಾಂತ್ರಿಕ ವರ್ಗವೂ ಬದಲಾಗಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.