ಬೆನ್ನ ಮೇಲೆ ದರ್ಶನ್​ ಅಭಿನಯದ ರಾಬರ್ಟ್​ ಚಿತ್ರದ ಟ್ಯಾಟು ಹಾಕಿಸಿಕೊಂಡ ಅಭಿಮಾನಿ ಲೋಕಿ

rabart feb 12 2020
Published on

ಬೆಂಗಳೂರು: ಖ್ಯಾತ ನಟ ದರ್ಶನ್​ ತೂಗದೀಪ ಅವರ ಹುಟ್ಟು ಹಬ್ಬಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಅಭಿಮಾನಿಗಳಲ್ಲಿ ಉತ್ಸಾಹ ಅಧಿಕವಾಗತೊಡಗಿದೆ.

ಫೆ.16ರಂದು ನಟ ದರ್ಶನ್​ ಹುಟ್ಟು ಹಬ್ಬ. ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಷಯ ಕೋರಲು ಅಭಿಮಾನಿ ಲೋಕಿ ಎಂಬಾತ ರಾಬರ್ಟ್​ ಸಿನಿಮಾದ ಟ್ಯಾಟು ಬರೆಸಿಕೊಂಡಿದ್ದಾನೆ.

ರಾಬರ್ಟ್​ ಸಿನಿಮಾ ನಿರ್ದೇಶಕ ತರುಣ್​ ಸುಧೀರ್​ ಅವರ ಕಾರು ಚಾಲಕನಾಗಿರುವ ಲೋಕಿಗೆ ದರ್ಶನ್​ ಅಂದರೆ ಪ್ರಾಣ. ಹೀಗಾಗಿ ಆತ ತನ್ನ ಬೆನ್ನಮೇಲೆ ದೊಡ್ಡದಾದ ಟ್ಯಾಟು ಬರೆಸಿಕೊಂಡಿದ್ದಾನೆ.

ಲೋಕಿ ಸತತ 5 ತಾಸುಗಳ ಕಾಲ ಟ್ಯಾಟು ಹಾಕಿಸಿಕೊಂಡಿದ್ದಾನೆ. ಅಲ್ಲದೆ ಆತ ಫೆ.16ರಂದು ದರ್ಶನ್​ಗೆ ವಿಶೇಷವಾಗಿ ಶುಭಾಷಯ ಹೇಳಲು ನಿರ್ಧರಿಸಿದ್ದಾನೆ.

ದರ್ಶನ್​ ಹುಟ್ಟುಹಬ್ಬದ ದಿನ ಸಮೀಪಿಸುತ್ತಿದ್ದಂತೆ ಅಭಿಮಾನಿಗಳು ಯಾವ ರೀತಿ ಸಂಭ್ರಮ ಆಚರಿಸಲು ನಿರ್ಧಾರ ಮಾಡಿದ್ದಾರೋ ಗೊತ್ತಿಲ್ಲ. ಅಂತು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನಟನ ಹುಟ್ಟುಹಬ್ಬದ ಆಚರಿಸಲು ಮುಂದಾಗಿದ್ದಾರೆ. (ದಿಗ್ವಿಜ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net