ಹುಟ್ಟುಹಬ್ಬದ ಆಚರಣೆಗೆ ಬ್ರೇಕ್​ ಹಾಕಿ ನಟ ದರ್ಶನ್​ ಅಭಿಮಾನಿಗಳಿಗೆ ನೀಡಿದ ಸಂದೇಶ ಹೀಗಿದೆ...

Darshan
Published on

ಬೆಂಗಳೂರು: ಈ ವರ್ಷ ಹುಟ್ಟುಹಬ್ಬ (ಫೆಬ್ರವರಿ 16) ಆಚರಿಸಿಕೊಳ್ಳುವುದಿಲ್ಲ. ಇದ್ದಲ್ಲಿ ಹಾರೈಸಿ ಎಂದು ಅಭಿಮಾನಿಗಳಿಗೆ ಸಂದೇಶ ನೀಡುವ ಮೂಲಕ ಫೇಸ್​ಬುಕ್​ ಲೈವ್​ ಕುತೂಹಲಕ್ಕೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತೆರೆ ಎಳೆದಿದ್ದಾರೆ.

2019ರಲ್ಲಿ ತುಂಬಾ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿದೆವು. ಆದರೆ, 2020ರಲ್ಲಿ ಕರೊನಾದಿಂದಾಗಿ ತುಂಬಾ ಕಷ್ಟ ಅನುಭವಿಸುವಂತಾಯಿತು. ಅನೇಕ ಮಂದಿ ಕೆಲಸವಿಲ್ಲದೆ ಖಾಲಿ ಕುಳಿತಿದ್ದರು. ನಾನು ಕೂಡ ಕೆಲವಿಲ್ಲದೆ ಕುಳಿತಿದ್ದೆ. 2020ನೇ ವರ್ಷ ಸುಮ್ಮನೆ ವ್ಯರ್ಥವಾದರೂ ಸಾಕಷ್ಟು ಪಾಠವನ್ನು ನಮಗೆ ಕಲಿಸಿದೆ.

ಈಗಷ್ಟೇ ತಾನೇ ನಾವು ಚೇತರಿಸಿಕೊಳ್ಳುತ್ತಿದ್ದೇವೆ. ಹೀಗಾಗಿ ಈ ಬಾರಿ ಹುಟ್ಟಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದೇನೆ. ಯಾರು ನನ್ನ ಮನೆಯ ಬಳಿ ಬರಬೇಡಿ ಎಂದು ಮನವಿ ಮಾಡಿಕೊಂಡ ದರ್ಶನ್​, ಬರ್ತಡೇ ದಿನ ನಾನು ಮನೆಯಲ್ಲಿ ಇರುವುದಿಲ್ಲ. ಇದ್ದಲ್ಲಿ ಹಾರೈಸಿ. ಮೊದಲು ನಿಮ್ಮ ಮನೆಯ ಬಗ್ಗೆ ಯೋಚನೆ ಮಾಡಿ. ಹಣವನ್ನು ಯಾವುದಾದರೂ ಒಳ್ಳೆಯದ್ದಕ್ಕೆ ಬಳಿಸಿಕೊಳ್ಳಿ. ಅಷ್ಟು ದೂರು ದಣಿದುಕೊಂಡು ಬರಬೇಡಿ. ನಾನು ಇರುವುದಿಲ್ಲ ಎಂದು ಹೇಳಿದರು.

ಇನ್ನು ಹುಟ್ಟುಹ್ಹಬವೆಂದರೆ ನಾವು ಸಹ ಕೆಲವೊಂದು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಕರೊನಾ ಇರುವುದರಿಂದ ಪೊಲೀಸರು ಅನುಮತಿ ನೀಡುವುದಿಲ್ಲ. ತುಂಬಾ ಜನ ಸೇರುವುದು ಸಹ ಒಳ್ಳೆಯದಲ್ಲ ಎಂದ ದರ್ಶನ್​, ಈ ವರ್ಷ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net