

ಬೆಂಗಳೂರು: ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಆಡಳಿತ ಪಕ್ಷದ ವಿರುದ್ಧ ಪೇಸಿಎಂ ಪೋಸ್ಟರ್ ಕ್ರಿಯೇಟ್ ಮಾಡಿ ದೊಡ್ಡ ಅಭಿಯಾನವನ್ನೇ ನಡೆಸಿ ಸಂಚಲನ ಸೃಷ್ಟಿಸಿತ್ತು. ಅದೇ ಈಗ ಕಾಂಗ್ರೆಸಿಗರಿಗೆ ಮುಳುವಾಗಿದ್ದು, ಕಾನೂನು ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿಯೊಂದು ಎದುರಾಗಿದೆ.
ಪೇಟಿಎಂ ಬದಲಿಗೆ ಪೇಸಿಎಂ ಎಂದು ಪದಪ್ರಯೋಗ ಮಾಡಿರುವ ಕೆಪಿಸಿಸಿ, ಅದರಲ್ಲಿ ಪೇಟಿಎಂ ಮಾದರಿಯಲ್ಲೇ ಪೋಸ್ಟರ್ ಡಿಸೈನ್ ಮಾಡಿ, ಪರ್ಸೆಂಟೇಜ್ ಭ್ರಷ್ಟಾಚಾರದ ವಿರುದ್ಧ ಅಭಿಯಾನ ಕೈಗೊಂಡಿತ್ತು. ಅಂಥದ್ದೇ ಒಂದು ಪೋಸ್ಟರ್ನಲ್ಲಿ ನಟ ಅಖಿಲ್ ಅಯ್ಯರ್ ಅವರ ಫೋಟೋ ಬಳಕೆ ಆಗಿದ್ದು, ಇದೀಗ ಅವರು ಆ ಸಂಬಂಧ ಕಾನೂನುಕ್ರಮ ಕೈಗೊಳ್ಳಲಿರುವುದಾಗಿ ತಿಳಿಸಿದ್ದಾರೆ.
ತನಗೆ ಯಾವುದೇ ರೀತಿಯಲ್ಲಿ ಸಂಬಂಧವಿರದಿದ್ದರೂ ಈ ಅಭಿಯಾನದಲ್ಲಿ ತನ್ನ ಫೋಟೋ ಬಳಸಿರುವುದು ಕಾನೂನುಬಾಹಿರ. ಇದರ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಿರುವುದಾಗಿ ಹೇಳಿರುವ ನಟ ಅಖಿಲ್, ಈ ಕುರಿತು ಟ್ವೀಟ್ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಅದನ್ನು ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಟ್ಯಾಗ್ ಮಾಡಿದ್ದಾರೆ. ಹೀಗಾಗಿ ಪೇಸಿಎಂ ಅಭಿಯಾನದಿಂದಾಗಿ ಕಾಂಗ್ರೆಸಿಗರು ಶೀಘ್ರದಲ್ಲೇ ಕಾನೂನುಕ್ರಮ ಎದುರಿಸಬೇಕಾಗಿ ಬಂದರೂ ಅಚ್ಚರಿ ಏನಿಲ್ಲ.