ಅಜಿತ್ ಮನೆಗೆ ಬಂದ ದುಬಾರಿ ಐಷಾರಾಮಿ ಕಾರ್! ಬೆಲೆ ಕೇಳಿ ಫ್ಯಾನ್ಸ್ ಶಾಕ್ |Actor Ajith New Car

ajith final
Published on

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟ ಅಜಿತ್ ಕುಮಾರ್ ಇತ್ತೀಚೆಗಷ್ಟೇ ಪೋರ್ಸೆ GT3 RS ಐಶಾರಾಮಿ ಕಾರು ಖರೀದಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದೀಗ ಅಜಿತ್ ಅವರ ಪತ್ನಿ ಹಾಗೂ ಮಾಜಿ ನಟಿ ಶಾಲಿನಿ ಅಜಿತ್ ಕುಮಾರ್, ಐಶಾರಾಮಿ ಪೋರ್ಸೆ GT3 RS ಕಾರಿನ ಫೋಟೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶಾಲಿನಿ ಅಜಿತ್ ಕುಮಾರ್, ಪೋರ್ಸೆ GT3 RS ಕಾರಿನ ಜತೆ ಅಜಿತ್ ಇರುವ ಫೋಟೋದೊಂದಿಗೆ, "ಅವರು ಕಾರು ಕೊಂಡರು, ದಿ ಸ್ಟೈಲ್ ಅಂಡ್ ಮೈ ಹಾರ್ಟ್' ಎಂದು ಹಾರ್ಟ್ ಎಮೋಜಿ ಹಂಚಿಕೊಂಡಿದ್ದಾರೆ.

ಅಜಿತ್ ಕುಮಾರ್ ಕಾರು ಹಾಗೂ ಬೈಕುಗಳ ಬಗ್ಗೆ ಹೆಚ್ಚಿನ ಒಲವು ಹೊಂದಿರುವ ವಿಚಾರ ಅವರ ಫ್ಯಾನ್ಸ್​​​ಗೆ ತಿಳಿದೇ ಇದೆ. ನಟ ಅಜಿತ್ ಖರೀದಿಸಿರುವ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಅಗಿದೆ.

ಪೋರ್ಸೆ GT3 RS ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರುಪಾಯಿಗಳು ಎನ್ನಲಾಗುತ್ತಿದೆ. ಇದನ್ನು ಕೇಳಿದ ಫ್ಯಾನ್ಸ್ ಒಂದು ಕ್ಷಣ ಶಾಕ್ ಆಗಿದ್ದಾರೆ.

ಪೋರ್ಸೆ 911 GT3 RS ಐಶಾರಾಮಿ ಕಾರು 4,000 ಸಿಸಿಯದ್ದಾಗಿದೆ. 6 ಸಿಲಿಂಡರ್ ಎಂಜೀನ್ ಹೊಂದಿರುವ ಈ ಕಾರು 0-100 ಕಿಲೋಮೀಟರ್ ವೇಗ ತಲುಪಲು ಕೇವಲ 3.2 ಸೆಕೆಂಡ್ ಕಾಲ ತೆಗೆದುಕೊಳ್ಳುತ್ತದೆ. ಈ ಕಾರಿನಲ್ಲಿ ಗರಿಷ್ಠ ಗಂಟೆಗೆ 296 ಕಿಲೋಮೀಟರ್ ವೇಗವನ್ನು ತಲುಪಬಹುದಾಗಿದೆ. ಈ ಕಾರಿನ ಮತ್ತೊಂದು ವಿಶೇಷ ಎಂದರೆ, ಈ ಕಾರಿನಲ್ಲಿ ಮೂರು ರೀತಿಯ ಡ್ರೈವಿಂಗ್ ಮೋಡ್‌ಗಳಿವೆ.

ಇದರಲ್ಲಿ ಮೊದಲನೆಯದ್ದು ನಾರ್ಮಲ್ ಡ್ರೈವಿಂಗ್, ಎರಡನೇಯದ್ದು ಸ್ಪೋರ್ಟ್ಸ್ ಡ್ರೈವಿಂಗ್ ಹಾಗೂ ಮೂರನೇಯದ್ದು ಟ್ರ್ಯಾಕ್ ಡ್ರೈವಿಂಗ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net