ಬಾಲಿವುಡ್ ನಟ ಅಜಯ್ ದೇವಗನ್​ ಮತ್ತೆ ಸಿಂಗಂ

Singam
Published on

ನಿರ್ದೇಶಕ ರೋಹಿತ್ ಶೆಟ್ಟಿ ಬಗ್ಗೆ ಬಾಲಿವುಡ್​ನಲ್ಲೊಂದು ಜೋಕ್ ಇದೆ. ವರ್ಷದ ಆರು ತಿಂಗಳು ಅವರು ಪೊಲೀಸ್ ಚಿತ್ರಗಳನ್ನು ಮಾಡಿದರೆ, ಇನ್ನಾರು ತಿಂಗಳು ‘ಗೋಲ್ಮಾಲ್’ (ಕಾಮಿಡಿ ಚಿತ್ರಗಳ ಸರಣಿ) ಮಾಡುತ್ತಿರುತ್ತಾರೆ ಎಂದು ಹೇಳಿಕೊಂಡು ಜನ ನಗುತ್ತಿರುತ್ತಾರೆ. ಅದಕ್ಕೆ ಸರಿಯಾಗಿ, ರೋಹಿತ್, ಕಾಮಿಡಿ ಅಥವಾ ಆಕ್ಷನ್ ಚಿತ್ರಗಳನ್ನು ಬಿಟ್ಟು ಇನ್ನೊಂದು ಜಾನರ್ ಇದುವರೆಗೂ ಪ್ರಯತ್ನಿಸಿಲ್ಲ.

ರೋಹಿತ್ ನಿರ್ದೇಶನದ ‘ಸೂರ್ಯವಂಶಿ’ ಎಂಬ ಪೊಲೀಸ್ ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ‘ಸರ್ಕಸ್’ ಎಂಬ ಕಾಮಿಡಿ ಚಿತ್ರದ ಚಿತ್ರೀಕರಣ ಮುಗಿಸಿರುವ ಅವರು, ಮುಂದಿನ ವರ್ಷ ಬಿಡುಗಡೆ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ. ಈ ಮಧ್ಯೆ, ‘ಸಿಂಗಂ’ ಚಿತ್ರದ ಮೂರನೆಯ ಭಾಗ ನಿರ್ದೇಶನಕ್ಕೆ ಅವರು ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರ ಸಹ ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಸಾಗಲಿದೆಯಂತೆ. ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

‘ಸಿಂಗಂ 3’ ಚಿತ್ರದ ಮುಹೂರ್ತ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ಆದರೆ, ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ. 2023ರ ಆಗಸ್ಟ್ 15ರಂದು ಚಿತ್ರ ಬಿಡುಗಡೆಯಾಗಲಿದೆಯಂತೆ. ‘ಸೂರ್ಯವಂಶಿ’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಪ್ರಮುಖ ಪಾತ್ರ ವಹಿಸಿದರೆ, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ವಿಶೇಷವೆಂದರೆ, ಇಲ್ಲಿ ಅಕ್ಷಯ್ ಕುಮಾರ್ ಮತ್ತು ರಣವೀರ್ ಸಿಂಗ್ ಅತಿಥಿ ಪಾತ್ರ ಮಾಡುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net