

ಬೆಂಗಳೂರು: ಕಳೆದ ವರ್ಷವೇ ಪ್ರಾರಂಭವಾಗಿತ್ತು ಓಂಪ್ರಕಾಶ್ ರಾವ್ ಮತ್ತು ಆದಿತ್ಯ ಕಾಂಬಿನೇಷನ್ನ ಚಿತ್ರ. ಆದರೆ, ಚಿತ್ರದ ಕಥೆ ಏನು, ಹೆಸರೇನು, ಯಾರೆಲ್ಲ ನಟಿಸುತ್ತಿದ್ದಾರೆ, ಯಾವಾಗ ಬಿಡುಗಡೆಯಾಗುತ್ತದೆ ಎಂಬ ಯಾವ ವಿಷಯವನ್ನೂ ಚಿತ್ರತಂಡದವರು ಬಹಿರಂಗಗೊಳಿಸಿರಲಿಲ್ಲ. ಈಗ ಕೊನೆಗೂ ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ಹೊರಬಿದ್ದಿದೆ.
ಪ್ರಮುಖವಾಗಿ, ಚಿತ್ರಕ್ಕೆ "ಇಲಾಖೆ' ಎಂದು ಹೆಸರಿಡಲಾಗಿದೆ. ಯಾವ ಇಲಾಖೆಯ ಬಗ್ಗೆ ಓಂಪ್ರಕಾಶ್ ರಾವ್ ಹೇಳುವುದಕ್ಕೆ ಹೊರಟಿದ್ದಾರೆ ಎಂದು ಗೊತ್ತಿಲ್ಲವಾದರೂ, ಪೊಲೀಸ್ ಚಿತ್ರಗಳಿಗೆ ರಾವ್ ಬಹಳ ಜನಪ್ರಿಯರಾಗಿರುವುದರಿಂದ, ಪೊಲೀಸ್ ಇಲಾಖೆಯ ಕುರಿತು ಚಿತ್ರ ಇರಬಹುದು ಎಂದು ನಂಬಬಹುದು. ಈ ಚಿತ್ರವು ನೈಜ ಟನೆಗಳನ್ನಾಧರಿಸಿದ್ದು, ಓಂಪ್ರಕಾಶ್ ರಾವ್ ಅವರೇ ಕಥೆ&ಚಿತ್ರಕಥೆ ರಚಿಸಿದ್ದಾರೆ. "ಇಲಾಖೆ' ಕುರಿತು ಮಾತನಾಡುವ ಓಂ ಪ್ರಕಾಶ್ ರಾವ್, ""ಲಾಕಪ್ ಡೆತ್', "ಎಕೆ 47' ತರಹದ ಕಥೆ ಇದು. ಬಹಳ ವರ್ಷಗಳ ನಂತರ ನಾನೇ ಕಥೆ ಬರೆದಿದ್ದೇನೆ' ಎನ್ನುತ್ತಾರೆ.