ಹೊಸ ಲುಕ್​ನಲ್ಲಿ ಅಭಿಮನ್ಯು ಕಾಶೀನಾಥ್​ ; ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರದಲ್ಲಿ ನಟ

cdcscas
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕನ್ನಡದ ಹೆಸರಾಂತ ನಟ, ನಿರ್ದೇಶಕ ಕಾಶೀನಾಥ್​ ಪುತ್ರ ಅಭಿಮನ್ಯು ಕಾಶೀನಾಥ್​ ಈಗಾಗಲೇ "ಬಾಜಿ', "12 ಎಎಂ ಮಧ್ಯರಾತ್ರಿ' ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಆ ಬಳಿಕ ಬ್ರೇಕ್​ ತೆಗೆದುಕೊಂಡಿದ್ದ ಅವರು ಸದ್ಯ "ಸೂರಿ ಲವ್ಸ್​ ಸಂಧ್ಯಾ' ಮತ್ತು "ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.

ಇತ್ತೀಚೆಗಷ್ಟೆ "ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾದ ಟೀಸರ್​ ರಿಲೀಸ್​ ಆಗಿದ್ದು, ವಿಭಿನ್ನ ಲುಕ್​, ಗೆಟಪ್​ ಮತ್ತು ಮ್ಯಾನರಿಸಂನಲ್ಲಿ ಅಭಿಮನ್ಯು ಮಿಂಚಿದ್ದಾರೆ. ಕಳೆದ 12 ವರ್ಷಗಳಿಂದ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಕಿರಣ್​ ಎಸ್​. ಸೂರ್ಯ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಚೊಚ್ಚಲ ಬಾರಿಗೆ ಆ್ಯಕ್ಷನ್​- ಕಟ್​ ಹೇಳಿರುವ ಚಿತ್ರವಿದು. ರೊಮ್ಯಾಂಟಿಕ್​ ಥ್ರಿಲ್ಲರ್​ ಜಾನರ್​ನ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗಿವೆ.

ನಟ ಕಿಚ್ಚ ಸುದೀಪ್​ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಚಿತ್ರದಲ್ಲಿ ಅಭಿಮನ್ಯು ಕಾಶೀನಾಥ್​ಗೆ ಸ್ಪೂರ್ತಿ ಉಡಿಮನೆ ನಾಯಕಿಯಾಗಿದ್ದು, ವಿಜಯಶ್ರೀ ಕಲಬುರ್ಗಿ, ಬಲರಾಜವಾಡಿ, ಶೋಭನ್​, ಅಯಾಂಕ್​, ರಿನಿ ಬೋಪಣ್ಣ, ಪ್ರದಿಪ್​, ರವಿತೇಜ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net