

‘ನಿಮ್ಮನ್ನು ಮದುವೆ ಆಗಬೇಕು ಅಂತನಿಸ್ತಿದೆ ...’, ‘ನಿಜಕ್ಕೂ ನೀವೇನಾ?’, ‘ಅಬ್ಬಾ ... ಎಂಥಾ ಬದಲಾವಣೆ’, ‘ನೀವಾ ಅಥವಾ ನಿಮ್ಮ ಮಗಳಾ?’, ‘ಯಾರೆ ನೀನು ಸುಂದರ ಚೆಲುವೆ ... ಹಾಡು ನೆನಪಿಗೆ ಬರ್ತಾ ಇದೆ ಮೇಡಂ’, ‘20 ವರ್ಷಗಳ ಹಿಂದಿನ ಖುಷ್ಬೂ ನೋಡಿದ ಹಾಗಾಯಿತು’ ...
ಹೀಗೆ ನೂರಾರು ಜನ ಬರೆದಿದ್ದಾರೆ. ಸಾವಿರಾರು ಜನ ಲೈಕ್ ಒತ್ತಿದ್ದಾರೆ. ಅದಕ್ಕೆ ಕಾರಣ ಖುಷ್ಬೂ ಅವರ ಕೆಲವು ಫೋಟೋಗಳು. ‘ರಣಧೀರ’ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದು ಪಡ್ಡೆಗಳ ನಿದ್ದೆಗೆಡೆಸಿದ್ದ ನಟಿ ಖುಷ್ಬೂ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ತಮಿಳುನಾಡು ಚುನಾವಣೆಗಳ ಸಂದರ್ಭದಲ್ಲೂ ದುಂಡಗಿದ್ದ ಖುಷ್ಬೂ, ಇತ್ತೀಚಿನ ಕೆಲವು ದಿನಗಳಲ್ಲಿ ಸಖತ್ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡಿದ್ದಾರೆ. ಈ ಹೊಸ ಫೋಟೋಗಳನ್ನು ನೋಡಿರುವ ನೆಟ್ಟಿಗರು, ಖುಷ್ಬೂ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಇಷ್ಟಕ್ಕೂ ಖುಷ್ಬೂ ಎಷ್ಟು ಕೆಜಿ ಕಡಿಮೆಯಾಗಿದ್ದಾರೆ ಎಂಬ ಪ್ರಶ್ನೆ ಸಹಜ. ಈ ಬಗ್ಗೆ ಅವರು ಹೇಳಿಕೊಳ್ಳದಿದ್ದರೂ, ಮೂಲಗಳ ಪ್ರಕಾರ ಕಳೆದ ಮೂರ್ನಾಲ್ಕು ತಿಂಗಳ ಅಂತರದಲ್ಲಿ 12 ಕೆಜಿ ಇಳಿಸಿಕೊಂಡಿದ್ದಾರಂತೆ. ಹೀಗೆ ಸ್ಲಿಮ್ ಆಗಿರುವ ಖುಷ್ಬೂ, ‘ಆಡವಾಳ್ಳು ಮೀಕು ಜೊಹ್ರಾಲು’ ಸೇರಿ ಒಂದಿಷ್ಟು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದು, ಇನ್ನು ಮುಂದೆ ಚಿತ್ರರಂಗದಲ್ಲಿ ಮತ್ತೆ ಸಕ್ರಿಯವಾಗಿರುವ ಸೂಚನೆ ನೀಡಿದ್ದಾರೆ.