

ಬಾಲಿವುಡ್ ನಟ ಅಮಿತಾಬ್ ಬಚ್ಚನ್ಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡ ಬಳಿಕ ಅಭಿಷೇಕ್ ಬಚ್ಚನ್ ಅವರಲ್ಲಿಯೂ ಸೋಂಕು ದೃಢಪಟ್ಟಿತ್ತು. ಬಳಿಕ ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಾಗೂ ಕರೊನಾ ಪಾಸಿಟಿವ್ ವರದಿ ಬಂದಿತ್ತು. ಇದೀಗ ಅಭಿಷೇಕ್ ಬಚ್ಚನ್ ಜತೆ ವೆಬ್ಸಿರೀಸ್ನಲ್ಲಿ ಕೆಲಸ ಮಾಡಿದ ಅಮಿತ್ ಸಾದ್ಗೂ ಇದೀಗ ಆತಂಕ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರವೇ ಅವರು ಪರೀಕ್ಷೆಗೊಳಪಟ್ಟಿದ್ದು, ಇದೀಗ ಆ ವರದಿ ನೆಗೆಟಿವ್ ಬಂದಿದೆ.
ಅಂದಹಾಗೆ, ಕರೊನಾ ಲಾಕ್ಡೌನ್ಗೂ ಮುನ್ನ ವೆಬ್ಸರಣಿಯ ಚಿತ್ರೀಕರಣ ಮುಗಿಸಿಕೊಂಡಿದ್ದ ಬ್ರೀಥ್ ವೆಬ್ ತಂಡ, ಲಾಕ್ಡೌನ್ ವೇಳೆ ಒಂದಷ್ಟು ಭಾಗದ ಡಬ್ಬಿಂಗ್ ಪ್ರಕ್ರಿಯೆ ಮುಗಿಸಿಕೊಂಡಿತ್ತು. ಆ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಅಭಿಷೇಕ್ ಡಬ್ಬಿಂಗ್ ಮಾಡಿದ್ದ ಸ್ಟುಡಿಯೋದಲ್ಲಿಯೇ ಅಮಿತ್ ಸಹ ಡಬ್ಬಿಂಗ್ ಮಾಡಿದ್ದರು. ಆ ಕಾರಣಕ್ಕೆ ಅಮಿತ್ ಸಹ ಕರೊನಾ ಪರೀಕ್ಷೆಗೆ ಮುಂದಾಗಿದ್ದರು. ಖುಷಿಯ ವಿಚಾರ ಏನೆಂದರೆ ಅವರ ವರದಿ ನೆಗೆಟಿವ್ ಬಂದಿದೆ.
ಇನ್ನು ಬ್ರೀಥ್ ವೆಬ್ಸರಣಿಗೂ ಕರೊನಾ ಆತಂಕ ಮನೆ ಮಾಡಿದ್ದು, ಇಡೀ ತಂಡ ಮತ್ತು ಡಬ್ಬಿಂಗ್ನಲ್ಲಿ ಪಾಲ್ಗೊಂಡವರೆಲ್ಲ ಪರೀಕ್ಷೆ ಮಾಡಿಸಿಕೊಳ್ಳುವಂತೆ ತನ್ನಲ್ಲ ಸದಸ್ಯರಿಗೆ ತಂಡ ತಿಳಿಸಿದೆ. ಸದ್ಯ ಬಾಲಿವುಡ್ ಸೇರಿ ಕಿರುತೆರೆ ಕಲಾವಿದರಲ್ಲಿಯೂ ಪಾಸಿಟಿವ್ ಕೇಸ್ಗಳು ಪತ್ತೆಯಾಗುತ್ತಿದ್ದು, ಹಲವು ಸೀರಿಯಲ್ ತಂಡಗಳು ಶೂಟಿಂಗ್ ಅನ್ನೇ ಸ್ಥಗಿತಗೊಳಿಸಿವೆ. (ಏಜೆನ್ಸೀಸ್)